ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಬಿಎಂಟಿಸಿ ಎಡವಟ್ಟು: ಪ್ರಯಾಣಿಕರು- ನಿರ್ವಾಹಕರ ನಡುವೆ ವಾಗ್ವಾದ!
ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿರುವ ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಮತ್ತೊಂದು ಎಡವಟ್ಟು ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಜಟಾಪಟಿಗೆ ಆಸ್ಪದ ಮಾಡಿಕೊಡಲಾಗಿದೆ.

ಬೆಂಗಳೂರು: ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿರುವ ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಮತ್ತೊಂದು ಎಡವಟ್ಟು ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಜಟಾಪಟಿಗೆ ಆಸ್ಪದ ಮಾಡಿಕೊಡಲಾಗಿದೆ.
ನೂತನ ವಾರದ ಪಾಸಿನಲ್ಲಿ ಸ್ಪಷ್ಟವಾದ ದಿನಾಂಕವನ್ನು ನಮೂದಿಸದೆ ದಿನದ ಪಾಸುಗಳ ರೀತಿಯಲ್ಲಿ ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ನಿರ್ವಾಹಕರು ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬುದು ಪ್ರಯಾಣಿಕರ ಆರೋಪವಾಗಿದೆ.

300 ರೂಪಾಯಿಯ ನೂತನ ಪಾಸಿನಲ್ಲಿ 1 ರಿಂದ 31ನೇ ತಾರೀಖಿನವರೆಗೂ ದಿನಾಂಕವನ್ನು ಮುದ್ರಿಸಲಾಗಿದೆ. ಆದರೆ, ಯಾವುದೇ ರೀತಿಯ ದಿನಾಂಕವನ್ನು ನಮೂದಿಸುತ್ತಿಲ್ಲ, ಕೌಂಟರ್ ಗಳಲ್ಲಿ ಪಾಸುಗಳನ್ನು ವಿತರಿಸುವವರು ಕನಿಷ್ಠ ಪಕ್ಷ ಒಂದು ಸಂಕೇತವನ್ನು ಕೂಡಾ ಮುದ್ರಿಸುತ್ತಿಲ್ಲ. ಇವುಗಳನ್ನು ನಿರ್ವಾಹಕರಿಗೆ ತೋರಿಸಿದರೆ ದಿನಾಂಕ ಇಲ್ಲ ಎಂದು ಮಾನ್ಯ ಮಾಡುತ್ತಿಲ್ಲ. ಈ ಬಗ್ಗೆ ಕೌಂಟರ್ ನವರನ್ನು ಕೇಳಬೇಕಿತ್ತು ಎಂದು ವಿನಾಕಾರಣ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ.

ಈ ಬಗ್ಗೆ ನಿರ್ವಾಹಕರನ್ನು ಪ್ರಶ್ನಿಸಿದರೆ, ವಾರದ ಪಾಸು ಪಡೆಯುವ ಪ್ರಯಾಣಿಕರೇ ಈ ಬಗ್ಗೆ ಕೌಂಟರ್ ಗಳಲ್ಲಿ ಬಗೆಹರಿಸಿಕೊಳ್ಳಬೇಕು, ಅದು ಅವರ ಜವಾಬಾಬ್ದಾರಿ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತಹ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಒಟ್ಟಾರೇ, ಬಿಎಂಟಿಸಿಯ ಮತ್ತೊಂದು ಯಡವಟ್ಟಿನಿಂದ ಲಾಕ್ ಡೌನ್ ಕೆಲಸವಿಲ್ಲದೆ ಕಳೆದೆರಡು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದ ಪ್ರಯಾಣಿಕರು ಇದೀಗ ಆರಾಮಾಗಿ ಕೆಲಸಕ್ಕೂ ಹೋಗದಂತಾಗಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


