ಧಾರವಾಡದಲ್ಲಿ ರೈತರೇ ಆರಂಭಿಸುತ್ತಿದ್ದಾರೆ ಬೀಜ ಉತ್ಪಾದನಾ ಕಂಪನಿ, ಇದು ರಾಜ್ಯದಲ್ಲೇ ಮೊದಲು!
ದುಬಾರಿ ಬೆಲೆಗೆ ಬಿತ್ತನೆ ಬೀಜ ಖರೀದಿಸಿ ನಂತರ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸದಾ ನಷ್ಟ ಅನುಭವಿಸುತ್ತಿದ್ದ ರೈತರು, ಈಗ ತಾವೇ ಬೀಜ ಉತ್ಪಾದನಾ ಕಂಪನಿ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮಾನ್ಸೂನ್ ವೇಳೆಗೆ ರಾಜ್ಯದಲ್ಲಿ ಮೊದಲ ರೈತರ ಬೀಜ ಉತ್ಪಾದನಾ ಕಂಪನಿ ಆರಂಭವಾಗಲಿದೆ.

ಹುಬ್ಬಳ್ಳಿ: ದುಬಾರಿ ಬೆಲೆಗೆ ಬಿತ್ತನೆ ಬೀಜ ಖರೀದಿಸಿ ನಂತರ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸದಾ ನಷ್ಟ ಅನುಭವಿಸುತ್ತಿದ್ದ ರೈತರು, ಈಗ ತಾವೇ ಬೀಜ ಉತ್ಪಾದನಾ ಕಂಪನಿ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮಾನ್ಸೂನ್ ವೇಳೆಗೆ ರಾಜ್ಯದಲ್ಲಿ ಮೊದಲ ರೈತರ ಬೀಜ ಉತ್ಪಾದನಾ ಕಂಪನಿ ಆರಂಭವಾಗಲಿದೆ.
ಧಾರವಾಡ ಜಿಲ್ಲೆಯ ನವಲಗುಂದದ ರೈತರ ತಂಡವೊಂದು ಸ್ವಯಂ ಅವಲಂಬಿತರಾಗಲು ಬೀಜಗಳನ್ನು ಉತ್ಪಾದಿಸುವ ಕಂಪನಿ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಕಲ್ಮೇಶ್ವರ ರೈತ ಉತ್ಪಾದನಾ ಕಂಪನಿ(ಕಲ್ಮೇಶ್ವರ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ) ಎಂಬ ಹೆಸರಿನ ಸಂಸ್ಥೆ ನವಲಗುಂದದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ರಾಜ್ಯದ ಮೊದಲ ಮೊದಲ ರೈತರ ಉತ್ಪಾದನಾ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಲಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ, ರಾಜ್ಯ ಬೀಜ್ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ, ನಬಾರ್ಡ್ ಬ್ಯಾಂಕ್ ಹಾಗೂ ದೇಶಪಾಂಡೆ ಫೌಂಡೇಷನ್ ರೈತರ ಬೀಜ ಉತ್ಪಾದನೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿವೆ.
ಈ ಕಂಪನಿಯಲ್ಲಿ ಸಮಾನ ಮನಸ್ಕರಾದ 20 ರೈತರು ಇದ್ದು, ಅವರು ಈ ಕಂಪನಿಯ ಷೇರುದಾರರಾಗಿದ್ದಾರೆ. ಸುಮಾರು 50 ಎಕರೆಯಲ್ಲಿ ಹೆಸರು ಕಾಳು ಬೆಳೆಯಲು ರೈತರು ನಿರ್ಧರಿಸಿದ್ದು, ಇದರಿಂದ ಸುಮಾರು 200 ಕ್ವಿಂಟಲ್ ಬೀಜ ಉತ್ಪಾದಿಸಲು ಮುಂದಾಗಿದ್ದಾರೆ.
ಮುಂಗಾರು ಆರಂಭವಾಗುತ್ತಿದ್ದಂತೆ ರೈತರು ಯಾವ ಕಂಪನಿಯ ಬೀಜ ಖರೀದಿಸುವುದು ಮತ್ತು ಅದು ಉತ್ತಮ ಗುಣಮಟ್ಟದ ಬೀಜವೇ ಎಂಬ ಬಗ್ಗೆ ಗೊಂದಲ ಇರುತ್ತದೆ. ಆದರೆ ಕೃಷಿ ವಿವಿಗಳ ಮತ್ತು ತಜ್ಞರ ಸಹಾಯದಿಂದ ರೈತರು ಸ್ವತಃ ತಾವೇ ಬೀಜ ಉತ್ಪಾದಿಸಿದರೆ ಈ ಯಾವ ಗೊಂದಲವೂ ಇರುವುದಿಲ್ಲ ಎಂದು ದೇಶಪಾಂಡೆ ಫೌಂಡೇಷನ್ ನ ಪ್ರೋಗ್ರಾಂ ಮ್ಯಾನೇಜರ್ ಚಂದ್ರಶೇಖರ್ ಸ್ವಾಮಿ ಎಂಟಿ ಅವರು ಹೇಳಿದ್ದಾರೆ.
ಇಲ್ಲಿ ರೈತರು ತಾವು ಬೆಳೆಯುವ ಕೃಷಿ ಉತ್ಪನ್ನಗಳನ್ನು ತಮ್ಮ ಕಂಪನಿ ಮೂಲಕ, ಬ್ರ್ಯಾಂಡ್ ನೇಮ್ ಅಡಿ ಮಾರಾಟ ಮಾಡಬಹುದು. ಸಂಸ್ಕರಣೆ ಘಟಕ ಸ್ಥಾಪಿಸಿಕೊಳ್ಳಬಹುದು. ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಹೋಲ್‌ಸೇಲ್ ದರದಲ್ಲಿ ನೇರವಾಗಿ ತಯಾರಕರಿಂದಲೇ ಖರೀದಿಸಬಹುದು. ವಹಿವಾಟಿನ ಜತೆ ಜತೆಗೆ ರೈತ ಕಂಪನಿ ಬೆಳೆಯುತ್ತದೆ. ದರಿಂದ ರೈತ ಸದಸ್ಯರಿಗೂ ಲಾಭವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


