ಕಲಬುರಗಿಯಲ್ಲಿ ಕೊರೋನಾ ಹಾವಳಿ ನಡುವೆ ತೀವ್ರಗೊಂಡ ಹಂದಿಗಳ ಕಾಟ!
ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೋನಾ ಹಾವಳಿ ನಡುವೆ ಹಂದಿಗಳ ಕಾಟ ತೀವ್ರಗೊಂಡಿದೆ.

ಕಲಬುರಗಿ: ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೋನಾ ಹಾವಳಿ ನಡುವೆ ಹಂದಿಗಳ ಕಾಟ ತೀವ್ರಗೊಂಡಿದೆ.
ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳು ಯಾವುದೇ ಭಯವಿಲ್ಲದೇ ರಾಜರೋಷವಾಗಿ ಅತ್ತಿಂದಿತ್ತ ಸುತ್ತುತ್ತಿವೆ. ಜಿಲ್ಲಾಸ್ಪತ್ರೆಯಿಂದ ಕೇವಲ ಹತ್ತು ಮೀಟರ್ ಅಂತರದಲ್ಲೇ ಜಿಮ್ಸ್ ಕೋವಿಡ್ ಆಸ್ಪತ್ರೆ ಇದ್ದರೂ, ಹಂದಿಗಳ ಹಾವಳಿ ಕುರಿತು ಯಾರೂ ಕೂಡ ಈ ಬಗ್ಗೆ ತಲೆಕೇಡಿಸಿಕೊಂಡಿಲ್ಲ. ಕೊಳಚೆ ಪ್ರದೇಶಗಳನ್ನು ಸುತ್ತಿ ಬರುವ ಹಂದಿಗಳು ಜಿಲ್ಲಾಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿವೆ.
ಹಂದಿಗಳ ಓಡಾಟದಿಂದ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಾಧ್ಯಮದಲ್ಲಿ ಹಂದಿಗಳ ಹಾವಳಿ ಸುದ್ದಿ ಬಿತ್ತಾರವಾಗುತ್ತಿದ್ದಂತೆ ಶನಿವಾರ ಜಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶರತ್ ಬಿ ಹಠಾತ್ ಭೇಟಿ ನೀಡಿದರು.
ತಕ್ಷಣವೇ ಆವರಣದಲ್ಲಿರುವ ಹಂದಿಗಳ ಸ್ಥಳಾಂತರ ಮಾಡುವಂತೆ ಹಂದಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ, ಹಂದಿ ಸಾಕಾಣಿಕೆ/ ಮಾಲೀಕರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆಯೂ ಜಿಲ್ಲಾಧಿಕಾರಿಗಳು ಜಿಮ್ಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ಆರೋಗ್ಯ ವರದಿ ಪ್ರಕಾರ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 2592ಕ್ಕೆ ಏರಿಕೆ ಆಗಿದ್ದು, 38 ಜನರನ್ನು ಕೊರೋನಾ ಬಲಿ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


