ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ.
ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.

ಚಾಮರಾಜನಗರ: ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.
ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನಿಗೆ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಮನಸೋತರು.
ಗಾಂಧಿ ವೇಷ ಧರಿಸಿದ್ದ 3ನೇ ತರಗತಿ ಸಾದಿಕ್ ಉಲ್ಲಾ ಖಾನ್ ಎಂಬ ವಿದ್ಯಾರ್ಥಿಯನ್ನು ಕಂಡು ವೇದಿಕೆಯಿಂದ ಕೆಳಗಿಳಿದ ಶಿಕ್ಷಣ ಸಚಿವರು ಆತನೊಂದಿಗೆ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳಿಗೆ ಪಟಾಪಟ್ ಎಂದು ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.
ಶಿಕ್ಷಣ ಸಚಿವ ಫಿಧಾ
ಇದೇ ವೇಳೆ, ಎರಡೂವರೆ ತಾಸು ಬಣ್ಣ ಹಚ್ಚಿಕೊಳ್ಳಲು ಸಮಯ ಬೇಕಿದ್ದು ತನ್ನ ಅಮ್ಮ ತನಗೆ ವೇಷಭೂಷಣ ಹಾಕುತ್ತಾರೆ ಎಂದು ತಿಳಿದಿದ್ದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಬಳಿ ತೆರಳಿ ಮಾತನಾಡಿಸಿ ಹಾಸ್ಯ ಚಟಾಕಿಗಳನ್ಕು ಹಾರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


