71ನೇ ಗಣರಾಜ್ಯೋತ್ಸವ

ಚಿತ್ರಗಳಲ್ಲಿ ಗಣತಂತ್ರ ದಿನ: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಸಾಮರ್ಥ್ಯ ಪ್ರದರ್ಶನ
ದೇಶ

ಚಿತ್ರಗಳಲ್ಲಿ ಗಣತಂತ್ರ ದಿನ: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಸಾಮರ್ಥ್ಯ ಪ್ರದರ್ಶನ

ದೇಶವು ಇಂದು (ಭಾನುವಾರ) 71ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡಿದೆ. ಭವ್ಯ ಮಿಲಿಟರಿ ಶಕ್ತಿ, ಇತಿಹಾಸ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನದೊಂದಿಗೆ ದೆಹಲಿಯ ರಾಜ್‌ಪತ್‌ನಲ್ಲಿ ಹೊಸ ಲೋಕದ ಅನಾವರಣವಾಗಿತ್ತು.

ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ. 
ರಾಜ್ಯ

ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ. 

ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.

ಸಚಿವ ಸ್ಥಾನ ತ್ಯಾಗ... ಪಕ್ಷದ ನಿರ್ಧಾರಕ್ಕೆ ಬದ್ದ: ಡಿಸಿಎಂ ಗೋವಿಂದ ಕಾರಜೋಳ
ರಾಜಕೀಯ

ಸಚಿವ ಸ್ಥಾನ ತ್ಯಾಗ... ಪಕ್ಷದ ನಿರ್ಧಾರಕ್ಕೆ ಬದ್ದ: ಡಿಸಿಎಂ ಗೋವಿಂದ ಕಾರಜೋಳ

ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎನ್ನುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಪಕ್ಷದ ನಿರ್ಧಾರಕ್ಕೆ ತಾವು ಬದ್ಧ ಎಂದು ತಿಳಿಸಿದ್ದಾರೆ.