ಎಸ್.ಸುರೇಶ್ ಕುಮಾರ್

ಜನರಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸುವ ರೀತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ: ಎಸ್. ಸುರೇಶ್ ಕುಮಾರ್
ಕೋರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಇಡೀ ಸಮಾಜ ಎದುರು ನೋಡುತ್ತಿದ್ದು, ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಾಲೆ ನಡೆಸಲು ಅವಕಾಶ ಕೋರಿ ಪ್ರಿ ಸ್ಕೂಲ್ ಮುಖ್ಯಸ್ಥರ ನಿಯೋಗ ಶಿಕ್ಷಣ ಸಚಿವರಿಗೆ ಮನವಿ
ಬೆಂಗಳೂರಿನ ಪೂರ್ವ ಪ್ರಾಥಮಿಕ ಶಾಲೆ(ಪ್ರಿ ಸ್ಕೂಲ್)ಪ್ರತಿನಿಧಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಗುರುವಾರ ಭೇಟಿಯಾಗಿದ್ದು ಶೀಘ್ರದಲ್ಲೇ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕಡ್ದಾಯ ಮಾರ್ಗಸೂಚಿಗಳ ಜತೆಗೆ ತಾವು ತರಗತಿ ಪುನಾರಂಬ ಮಾಡುವುದಾಗಿ ಅವರು ಇದೇ ವೇಳೆ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಜೂನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಚಿಂತನೆ: ಫೇಸ್‌ಬುಕ್ ಲೈವ್ ನಲ್ಲಿ ಸಚಿವ ಸುರೇಶ್ ಕುಮಾರ್
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ 10 ನೇ ತರಗತಿ ಅಥವಾ ಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜೂನ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ನಡೆಸಲು ಇಲಾಖೆ ಯೋಜಿಸಿದೆ ಎಂದು ತಿಳಿಸಿದ್ದಾರೆ.

ಪೌರಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ಸಚಿವ, ಪತ್ನಿಯೊಂದಿಗೆ ರಸ್ತೆಗಳ ಕಸ ಗುಡಿಸಿದ ಸುರೇಶ್ ಕುಮಾರ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಂದಿಗೂ ತಮ್ಮ ಸರಳ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಇಂದೂ ಸಹ ಬೆಳಿಗ್ಗಿನ ವಾಕಿಂಗ್ ಹೋಗಿದ್ದಾಗ ಮನೆ ಮುಂದಿನ ರಸ್ತೆಗಳ ಕಸ ಗುಡಿಸಿ ಮಾದರಿಯಾಗಿದ್ದಾರೆ.

ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ.
ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.

ಪ್ರತಿಮೆ ನಿರ್ಮಾಣ- ಓಲೈಕೆ ರಾಜಕಾರಣ: ಸುರೇಶ್ ಕುಮಾರ್
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ನಿರ್ಮಾಣ ಮಾಡಬೇಕೆಂದಿರುವ ಕ್ರಿಸ್ತ ಪ್ರತಿಮೆ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಓಲೈಕೆ ರಾಜಕಾರಣ ಎಂದು ಆರೋಪಿಸಿದ್ದಾರೆ.

ಚುನಾವಣಾ ಪ್ರಚಾರ: ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿದ 'ಸಹೃದಯಿ ಸಚಿವ'
ಶಾಲೆ ಬಿಟ್ಟು ಯಾವುದೇ ಚಿಂತೆಯಿಲ್ಲದೇ ಮನೆಮುಂದೆ ಆಟವಾಡಿಕೊಳ್ಳುತ್ತಿದ್ದ ಮಕ್ಕಳಿಗೆ ಸೋಮವಾರ ಹೊಸದೊಂದು ಅಚ್ಚರಿ ಕಾದಿತ್ತು, ಮಹಾಲಕ್ಷ್ಮಿ ಲೇಔಟಿನ ಕುರುಬರಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿರುವ ವಿದ್ಯಾಮಂತ್ರಿ ಎಸ್,ಸುರೇಶ್ ಕುಮಾರ್ ತಮ್ಮ ಸಹೃದಯತೆ ಮೆರೆದಿದ್ದಾರೆ.

ವಿಶೇಷ ಅಧಿವೇಶನಕ್ಕೆ ಬಿಜೆಪಿ ಆಗ್ರಹ
ಕೆರೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ ಬುಲ್ಡೋಜ್ ನೀತಿ ಅನುಸರಿಸುತ್ತಿದ್ದು, ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ಇಟ್ಟುಕೊಂಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ...

