ಅಪ್ರಾಪ್ತನನ್ನು ವರಿಸಿದ 19ರ ಯುವತಿ: ಬೆಂಗಳೂರಿನಲ್ಲೊಂದು ವಿಚಿತ್ರ ಸಂಗತಿ
ನಗರದ ಅರೆಕೆರೆ ಮೈಕೋ ಬಡಾವಣೆಯಲ್ಲಿ 16 ವರ್ಷದ ಅಪ್ರಾಪ್ತನನ್ನು 19ರ ಯುವತಿ ವಿವಾಹವಾಗಿರುವ ಕುತೂಲಹಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು: ನಗರದ ಅರೆಕೆರೆ ಮೈಕೋ ಬಡಾವಣೆಯಲ್ಲಿ 16 ವರ್ಷದ ಅಪ್ರಾಪ್ತನನ್ನು 19ರ ಯುವತಿ ವಿವಾಹವಾಗಿರುವ ಕುತೂಲಹಕಾರಿ ಸಂಗತಿ ಬೆಳಕಿಗೆ ಬಂದಿದೆ.
ಯುವತಿಗೆ 16 ವರ್ಷದ ಅಪ್ರಾಪ್ತ ಬಾಲಕನ ಜೊತೆ ಮದುವೆ ಮಾಡಿಸಿರುವ ಘಟನೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಯುವತಿ ಹಾಗೂ ಬಾಲಕನಿಗೆ ಮದುವೆ ಮಾಡಲಾಗಿತ್ತು.
ಬಳಿಕ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಬಾಲ್ಯ ವಿವಾಹದ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಇದೇ ತಿಂಗಳ 19ರಂದು ಯುವಕನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಾಲ್ಯ ವಿವಾಹ ಬಯಲಿಗೆ ಬಂದಿತ್ತು.
ಸದ್ಯ ಯುವತಿಯನ್ನು ಪೋಷಕರಿಗೆ ಒಪ್ಪಿಸಿ, ಅಪ್ರಾಪ್ತ ಬಾಲಕನನ್ನು ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
ಬಾಲಕ ಹಾಗೂ ಯುವತಿ ಪೋಷಕರು ಸಂಬಂಧಿಕರಾಗಿದ್ದು, ಯುವತಿಗೆ ತಂದೆ ತಾಯಿ ಇರಲಿಲ್ಲ. ಹೀಗಾಗಿ ಅವಳು ಅತ್ತೆ ಮನೆಯಲ್ಲಿ ವಾಸವಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರಿಲ್ಲದ ಆಕೆಗೆ ಮದುವೆ ಮಾಡಿಸಲಾಗಿತ್ತು ಎನ್ನಲಾಗಿದೆ.
ಕಳೆದ 20 ವರ್ಷಗಳಿಂದ ಬಾಲಕನ ಪೋಷಕರು ಬೆಂಗಳೂರಿನಲ್ಲೇ ವಾಸವಾಗಿದ್ದು, ಬಾಲಕನ ತಂದೆ ವಾಹನ ಚಾಲಕರಾಗಿದ್ದಾರೆ
ತಿಳಿದು ಬಂದಿದೆ.
ಎರಡು ಕುಟುಂಬದವರು ಅಸ್ಸಾಂ ಹಾಗೂ ನೇಪಾಳದವರಾಗಿದ್ದು, ಬಲವಂತವಾಗಿ ಪೋಷಕರು ಅಪ್ರಾಪ್ತ ಬಾಲಕನ ಮದುವೆ ಮಾಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪುಟ್ಟೇನಹಳ್ಳಿ ಠಾಣೆ ಪ್ರಕರಣ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


