ಭಾರತೀಯ ವಿಜ್ಞಾನ ಸಂಸ್ಥೆ; ಫೆ 29 ರಂದು ಸಾರ್ವಜನಿಕರಿಗೆ ಮುಕ್ತ ದಿನ
ನಗರದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಈ ಹಿಂದಿನ ವರ್ಷಗಳಂತೆ ಸಂಸ್ಥೆಯ ’ಓಪನ್ ಡೇ-ಸಾರ್ವಜನಿಕರಿಗೆ ಮುಕ್ತ ದಿನ’ವನ್ನು ಫೆಬ್ರವರಿ ೨೯ರ ಶನಿವಾರ ಆಯೋಜಿಸಿದೆ.

ಬೆಂಗಳೂರು: ನಗರದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಈ ಹಿಂದಿನ ವರ್ಷಗಳಂತೆ ಸಂಸ್ಥೆಯ ’ಓಪನ್ ಡೇ-ಸಾರ್ವಜನಿಕರಿಗೆ ಮುಕ್ತ ದಿನ’ವನ್ನು ಫೆಬ್ರವರಿ ೨೯ರ ಶನಿವಾರ ಆಯೋಜಿಸಿದೆ.
ಅಂದು ಬೆಳಿಗ್ಗೆ ೯ರಿಂದ ಸಂಜೆ ೫.೩೦ರವರೆಗೆ ಸಂಸ್ಥೆಗೆ ಪ್ರವೇಶ ಮುಕ್ತವಾಗಿರಲಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಮುದಾಯಗಳಿಗೆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ಅಂದು ವಿದ್ಯಾರ್ಥಿಗಳು, ವಿಜ್ಞಾನ-ತಂತ್ರಜ್ಞಾನ ಆಸಕ್ತರು, ಸಾರ್ವಜನಿಕರು, ಸಂಸ್ಥೆಯ ಆವರಣದಲ್ಲಿ ಓಡಾಡಲು ಹಾಗೂ ಮಾಹಿತಿಪೂರ್ಣ ಮತ್ತು ಆಕರ್ಷಕ ವಿಜ್ಞಾನ-ತಂತ್ರಜ್ಞಾನ ಚಟುವಟಿಕೆಗಳನ್ನು ಅರಿಯಲು ಪ್ರವೇಶ ಮುಕ್ತವಾಗಿರುತ್ತದೆ.
ಅಂದು ಸಂಸ್ಥೆಯ ವಿವಿಧ ವಿಭಾಗಗಳು ಮತ್ತು ಕೇಂದ್ರಗಳಲ್ಲಿ ಜನಪ್ರಿಯ ಉಪನ್ಯಾಸಗಳು, ಪ್ರಾಯೋಗಿಕ ಪ್ರದರ್ಶನಗಳು, ಭಿತ್ತಿಪತ್ರ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ವಿವಿಧ ವೈಜ್ಞಾನಿಕ ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಡೆಯಲಿವೆ. ಯುವ ವಿದ್ಯಾರ್ಥಿಗಳ ಆಕರ್ಷಣೆಗಾಗಿ ’ಕಿಡ್ಸ್-ಝೋನ್’ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಲ್ಲಿ ವಿಜ್ಞಾನ- ತಂತ್ರಜ್ಞಾನದ ಹಲವಾರು ಪ್ರದರ್ಶನಗಳು ನಡೆಯಲಿವೆ. ಓಪನ್ ಡೇ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


