ಬೆಂಗಳೂರು: ಸಿವಿ ರಾಮನ್ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ಯೂಟ್; 20 ಕೋವಿಡ್ ರೋಗಿಗಳ ಸ್ಥಳಾಂತರ
ನಗರದ ಕೋವಿಡ್ ನಿಗದಿತ ಇಂದಿರಾನಗರದ ಸಿವಿ ರಾಮನ್ ಆಸ್ಪತ್ರೆಯಲ್ಲಿ ಕಾಣಿಸಿಕೊಮಡ ಶಾರ್ಟ್ ಸರ್ಕ್ಯೂಟ್ ನಿಂದ ಕೇಂದ್ರೀಕೃತ ಆಮ್ಲಜನಕ ಪೈಪ್ ಕತ್ತರಿಸಲ್ಪ ಹಿನ್ನೆಲೆಯಲ್ಲಿ, ಅಲ್ಲಿದ್ದ ಸುಮಾರು 20 ಕೋವಿಡ್ ರೋಗಿಗಳನ್ನು ಮೂರು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಬೆಂಗಳೂರು: ನಗರದ ಕೋವಿಡ್ ನಿಗದಿತ ಇಂದಿರಾನಗರದ ಸಿವಿ ರಾಮನ್ ಆಸ್ಪತ್ರೆಯಲ್ಲಿ ಕಾಣಿಸಿಕೊಮಡ ಶಾರ್ಟ್ ಸರ್ಕ್ಯೂಟ್ ನಿಂದ ಕೇಂದ್ರೀಕೃತ ಆಮ್ಲಜನಕ ಪೈಪ್ ಕತ್ತರಿಸಲ್ಪ ಹಿನ್ನೆಲೆಯಲ್ಲಿ, ಅಲ್ಲಿದ್ದ ಸುಮಾರು 20 ಕೋವಿಡ್ ರೋಗಿಗಳನ್ನು ಮೂರು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಈ ರೋಗಿಗಳು ಹೈ ಡಿಪೆಂಡೆನ್ಸಿ ಘಟಕದಲ್ಲಿ (ಎಚ್‌ಡಿಯು) ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಸದ್ಯ 175 ಕೋವಿಡ್ ಹಾಸಿಗೆಗಳಿದ್ದು, 80ರಿಂದ 90 ರೋಗಿಗಳು ದಾಖಲಾಗಿದ್ದರು. ಈಪೈಕಿ 20 ರೋಗಿಗಳಿದ್ದ ಹಾಸಿಗೆಯ ಪ್ರದೇಶದ ಆಮ್ಲಜನಕ ಪೈಪ್ ಕತ್ತರಿಸಲ್ಪಟ್ಟಿತ್ತು. ತಕ್ಷಣ ಇತರ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ಅವರನ್ನು ಸ್ಥಳಾಂತರಿಸಲಾಯಿತು.
16 ಕೋವಿಡ್ ರೋಗಿಗಳನ್ನು 10 ಕಿಮೀ ದೂರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ, ಓರ್ವ ರೋಗಿಯನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಉಳಿದವರನ್ನು ಸಿವಿ ರಾಮನ್ ವೈದೇಹಿ ಆಸ್ಪತ್ರೆಗೆ ಸೇರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


