ರಾಜ್ಯ

ದರೋಡೆಗೆ ತಂದಿದ್ದ ಡ್ರಿಲ್ಲಿಂಗ್ ಮೆಷಿನ್ ಕೆಟ್ಟು ಗೋಲ್ಡ್ ಲೋನ್ ಅಂಗಡಿ ಬಚಾವ್!

ಡ್ರಿಲ್ಲಿಂಗ್ ಮೆಷಿನ್ ಸಮಯಕ್ಕೆ‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ದರೋಡೆ ಪ್ರಕರಣವೊಂದು ವಿಫಲವಾಗಿರುವ ಆಶ್ಚರ್ಯಕರ ಘಟನೆ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ವರದಿಯಾಗಿದೆ.

ದರೋಡೆಗೆ ತಂದಿದ್ದ ಡ್ರಿಲ್ಲಿಂಗ್ ಮೆಷಿನ್ ಕೆಟ್ಟು ಗೋಲ್ಡ್ ಲೋನ್ ಅಂಗಡಿ ಬಚಾವ್!
ಕಳ್ಳತನ(ಸಂಗ್ರಹ ಚಿತ್ರ)
Published On :

ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಸಮಯಕ್ಕೆ‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ದರೋಡೆ ಪ್ರಕರಣವೊಂದು ವಿಫಲವಾಗಿರುವ ಆಶ್ಚರ್ಯಕರ ಘಟನೆ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ವರದಿಯಾಗಿದೆ. 

ನಗರದ ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯು ದರೋಡೆಕೋರರ ದಾಳಿ ನಂತರವೂ ಸುರಕ್ಷಿತವಾಗಿದೆ. 
ಗೋಲ್ಡ್ ಲೋನ್​ ಅಂಗಡಿಯನ್ನು ದರೋಡೆ ಮಾಡಲು ದರೋಡೆಕೋರರು ಅದೇ ಕಟ್ಟಡದ ಮೇಲ್ಭಾಗದ ಮತ್ತೊಂದು ಶಾಪ್​ನಿಂದ ಒಳನುಗ್ಗಿದ್ದರು. ದರೋಡೆ ಮಾಡಲು ಸಂಚು ರೂಪಿಸಿ ಅಂಗಡಿಯ ಕಾಂಕ್ರಿಟ್​ ನೆಲವನ್ನು ಕೊರೆಯುವ ಪ್ಲಾನ್​ ಮಾಡಿದ್ದರು.

ಆ.2 ರ ರಾತ್ರಿ ದ್ವಿಚಕ್ರವಾಹನದ​ಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಅಂಗಡಿಯ ಸ್ಟ್ರಾಂಗ್ ರೂಮ್​ನ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮೆಷಿನ್​ ಉಪಯೋಗಿಸಿ ಕೊರೆಯುವುದಕ್ಕೆ ಮುಂದಾಗಿದ್ದರು. ಆದರೆ, ಮೆಷೀನ್ ನಿಂದ​ ಎಷ್ಟೇ ಪ್ರಯತ್ನಿಸಿದ್ದರೂ ಆ ಡ್ರಿಲ್ಲಿಂಗ್ ಯಂತ್ರ ಕೆಲಸ ಮಾಡಲಿಲ್ಲ. 

ನಂತರ ಬೇರೆ ವಿಧಿ ಇಲ್ಲದೇ ಕಳ್ಳರು ಕಂಪ್ಯೂಟರ್ ಅಂಗಡಿಯಲ್ಲಿದ್ದ ಎರಡು ಸಾವಿರ ನಗದು, ಸಿಸಿ ಕ್ಯಾಮಾರಾ ಹಾಗೂ ಡಿವಿಆರ್ ಕಳವು ಮಾಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.