robbery

ಡೇಟಿಂಗ್ ಆ್ಯಪ್‌ನಲ್ಲಿ ಯುವತಿ ಪರಿಚಯ; ಭೇಟಿ ಮಾಡಲು ಹೋಗಿದ್ದ ಯುವಕನ ಅಪಹರಣ; 3.75 ಲಕ್ಷ ರೂ ದರೋಡೆ!
ಮರುದಿನ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ನಿಲ್ದಾಣದ ಹಿಂದೆ ಅವನನ್ನು ಇಳಿಸಿದ ನಂತರ ಆರೋಪಿ ಪರಾರಿಯಾಗಿದ್ದಾನೆ.

ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿ ದರೋಡೆಗೆ ಯತ್ನ; ಮಾಲೀಕನ ಮೇಲೆ ಗುಂಡಿನ ದಾಳಿ, Video
ದಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರ್ತೂರು ವ್ಯಾಪ್ತಿಯಲ್ಲಿ ಸಿನಿಮೀಯ ಶೈಲಿಯ ಕೃತ್ಯ: ಚಲಿಸುತ್ತಿದ್ದ ವ್ಯಾನ್ ಮೇಲೆ ದಾಳಿ; ಚಾಕು ತೋರಿಸಿ 45 ಸಾವಿರ ರೂ ದರೋಡೆ..!
ಸಂಜೆ 7ರಿಂದ 7.15ರ ನಡುವೆ ಅವರು ಕೊಡತಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ಕಂಪನಿಯತ್ತ ವಾಪಸಾಗುತ್ತಿದ್ದ ವೇಳೆ, ವಾಹನ ಚಾಲಕ ಅಜಯ್ ಕುಮಾರ್ ರಸ್ತೆ ಹಂಪ್ಸ್ ಬಳಿ ವಾಹನದ ವೇಗ ಕಡಿಮೆ ಮಾಡಿದ್ದಾರೆ.

ಬೆಂಗಳೂರು: ಪೂಜೆ ನೆಪದಲ್ಲಿ ಜ್ಯೋತಿಷಿ ಅಪಹರಣ; ಸುಲಿಗೆ ಮಾಡಿದ್ದ ಖದೀಮರು ಅಂದರ್!
ಮೊಹಮ್ಮದ್ ತಾರಿಕ್ ಹುಸೇನ್ ಹಲ್ಲೆಗೊಳಗಾದ ಜ್ಯೋತಿಷಿ. ಕೆಲ ದಿನಗಳ ಹಿಂದೆ ಆರಿಫ್ ಎಂಬಾತ ತಾರಿಕ್ ಹುಸೇನ್ ಅವರನ್ನು ಸಂಪರ್ಕಿಸಿ ತಮ್ಮ ಮನೆಗೆ ಬಂದು ಶಾಂತಿ ಪೂಜೆ ಮಾಡಿಸಬೇಕೆಂದು ಹೇಳಿ, ಆನ್‌ಲೈನ್ ಮೂಲಕ ₹10 ಸಾವಿರ ಮುಂಗಡ ಹಣವನ್ನೂ ಕಳುಹಿಸಿದ್ದ.

ಫ್ರೀ ಲಿಫ್ಟ್ ನಂಬಿ ಕಾರು ಹತ್ತಿದ ಟೈಲರ್‌ಗೆ ಶಾಕ್; ಹಲ್ಲೆ ನಡೆಸಿ ನಗದು ದೋಚಿದ ಗ್ಯಾಂಗ್; UPI ಮೂಲಕವೂ ಹಣ ವರ್ಗಾವಣೆ..!
ರಾಜು ಅವರು ಹತ್ತಿದ್ದ ಕಾರಿನಲ್ಲಿ ಅದಾಗಲೇ ಇಬ್ಬರು ವ್ಯಕ್ತಿಗಳು ಇದ್ದರು. ರಾಜು ಅವರನ್ನು ಕಾರು ಹತ್ತಿಸಿಕೊಂಡ ಆರೋಪಿಗಳು, ಅವರನ್ನು ಅವರ ಮನೆ ಕಡೆಗೆ ಕರೆದೊಯ್ಯುವ ಬದಲು ರಾಮನಗರದತ್ತ ಕರೆದುಕೊಂಡು ಹೋಗಿದ್ದಾರೆ.

ಬೆಂಗಳೂರು: ಬೈಕ್ ಟ್ಯಾಕ್ಸಿ ಕ್ಯಾಪ್ಟನ್ ಗೆ ಚಾಕು ತೋರಿಸಿ ಪ್ರಯಾಣಿಕನಿಂದ ದರೋಡೆ!
ಸಂತ್ರಸ್ತನನ್ನು ಎಂ.ಡಿ. ರುಕುನ್ ಉದ್ದೀನ್ ಎಂದು ಗುರುತಿಸಲಾಗಿದ್ದು, ಕಳೆದ ಏಳು ವರ್ಷಗಳಿಂದ ಕೆ.ಆರ್. ಪುರಂನ ಎ. ನಾರಾಯಣಪುರದಲ್ಲಿ ವಾಸಿಸುತ್ತಿದ್ದಾರೆ. ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.

ಹೋಮ್ ಟೂರ್ ಮಾಡಿ ಮನೆಯ ಸಂಪತ್ತು ತೋರಿಸಿದ ಯೂಟ್ಯೂಬರ್: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ Robbers!
ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಚಿನ್ನಾಭರಣಗಳನ್ನು ಪ್ರದರ್ಶಿಸುತ್ತಿದ್ದ ಖ್ಯಾತ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ನಡುರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಖಾನಾಪುರ ಹೆದ್ದಾರಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್: ಸ್ನೇಹಿತನ ದೋಚಿ ಸುಳ್ಳು ಕಥೆ ಕಟ್ಟಿದ ಕಿರಾತಕರು: ಮಾಸ್ಟರ್‌ಮೈಂಡ್ ಸೇರಿ 8 ಮಂದಿ ಅರೆಸ್ಟ್..!
ಪಶ್ಚಿಮ ಬಂಗಾಳ ಮೂಲದ ಹಾಗೂ ಬೆಳಗಾವಿಯ ಶಾಹಾಪುರದಲ್ಲಿ ವಾಸವಾಗಿರುವ ಚಿನ್ನಾಭರಣ ಕಾರಿಗರ ಎಸ್.ಕೆ. ಇಬಾದುಲ್ ಅವರು ಮೇ 20ರಂದು ತಮ್ಮ ಸ್ನೇಹಿತರಾದ ರಬಿಯುಲ್ ಗಾಜಿ ಮತ್ತು ಅಲಿ ಹುಸೇನ್ ಮಂಡಲ್ ಅವರೊಂದಿಗೆ ಗೋವಾಗೆ ತೆರಳುತ್ತಿದ್ದರು.

ಮಾಲೀಕನ ಮನೆಗೇ ಕನ್ನ: 27 ಲಕ್ಷ ರೂ ದೋಚಿ ಸಹಾಯಕ ಪರಾರಿ..!
ನವರತ್ನ ಕುಮಾರ್ ಅವರು ಅಂಗಡಿಯಿಂದ ತಂದಿದ್ದ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಲು ಮನೆಯಲ್ಲಿ ಇಟ್ಟಿದ್ದರು. ಬುಧವಾರ ರಾತ್ರಿ ಪತ್ನಿ ಜೊತೆ ಸಮೀಪದ ಔಷಧ ಅಂಗಡಿಗೆ ತೆರಳಿದ್ದರು.

