ಕೊರೋನಾ ವೈರಸ್: ಬೆಂಗಳೂರಿನ 38 ವಾರ್ಡ್ ಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿದ ಬಿಬಿಎಂಪಿ
ಪ್ರಮುಖ ಬೆಳವಣಿಗೆಯಲ್ಲಿ ಅತ್ತ ಕೇಂದ್ರ ಸರ್ಕಾರ ದೇಶದ 170ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಘೋಷಿಸಿದ ಬೆನ್ನಲ್ಲೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ತನ್ನ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ 38 ವಾರ್ಡ್ ಗಳನ್ನು ಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿದೆ.

ಬೆಂಗಳೂರು: ಪ್ರಮುಖ ಬೆಳವಣಿಗೆಯಲ್ಲಿ ಅತ್ತ ಕೇಂದ್ರ ಸರ್ಕಾರ ದೇಶದ 170ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಘೋಷಿಸಿದ ಬೆನ್ನಲ್ಲೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ತನ್ನ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ 38 ವಾರ್ಡ್ ಗಳನ್ನು ಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿದೆ.
ಕರ್ನಾಟಕದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಬೆಂಗಳೂರು, ಮೈಸೂರು, ಬೀದರ್, ಕಲಬುರ್ಗಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಹೀಗಿರುವಾಗಲೇ ನಿನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ 38 ವಾರ್ಡ್ಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿತ್ತು. ಆದರೀಗ ಬಿಬಿಎಂಪಿ ಆದೇಶ ಬದಲಾಗಿದ್ದು, ಕೇವಲ 32 ವಾರ್ಡ್ಗಳನ್ನು ಮಾತ್ರ ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದೆ.
ದಕ್ಷಿಣ ಮತ್ತು ಪೂರ್ವ ವಲಯದ 9, ಮಹದೇವಪುರ ಮತ್ತು ಪಶ್ಚಿಮ ವಲಯದ ತಲಾ 5, ಯಲಹಂಕದ 2, ಬೊಮ್ಮನಹಳ್ಳಿ ಮತ್ತು ಆರ್ ಆರ್ ನಗರ ವಲಯದ ತಲಾ 1 ವಾರ್ಡ್ಗಳನ್ನು ಬೆಂಗಳೂರಿನ ಕೊರೋನಾ ಹಾಟ್ಸ್ಪಾಟ್ಗಳು ಎಂದು ಗುರುತಿಸಲಾಗಿದೆ. ಇನ್ನು, ಹಾಟ್ಸ್ಪಾಟ್ ಜತೆಗೆ ರೆಡ್ ಜೋನ್, ಗ್ರೀನ್ ಜೋನ್, ಆರೆಂಜ್ ಜೋನ್ ಎಂದು ಸೋಂಕಿತರ ಸಂಖ್ಯೆ ಮತ್ತು ಕೊರೋನಾ ತೀವ್ರತೆ ಆಧಾರದ ಮೇರೆಗೆ ಕೆಲವು ಪ್ರದೇಶಗಳನ್ನು ಸದ್ಯದಲ್ಲೇ ಗುರುತಿಸಲಿದೆ.
ಬಿಬಿಎಂ ಘೋಷಣೆ ಮಾಡಿರುವ 32 ಹಾಟ್ ಸ್ಪಾಟ್ ವಾರ್ಡ್ ಗಳ ಪಟ್ಟಿ ಇಂತಿದೆ.
ಬೊಮ್ಮನಹಳ್ಳಿ ಝೋನ್
ಸಿಂಗಸಂದ್ರ ವಾರ್ಡ್
ಮಹದೇವಪುರ ಝೋನ್
ಹಗದೂರು ವಾರ್ಡ್, ಗರುಡಾಚಾರ್ ಪಾಳ್ಯ ವಾರ್ಡ್, ವರ್ತೂರು ವಾರ್ಡ್, ಹೂಡಿ ವಾರ್ಡ್, ಹೊರಮಾವು ವಾರ್ಡ್
ಈಸ್ಟ್ ಝೋನ್
ವಸಂತ್ ನಗರ ವಾರ್ಡ್, ಲಿಂಗರಾಜಪುರ ವಾರ್ಡ್, ಜೀವನ್‌ಭಿಮಾ ನಗರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಸಿ.ವಿ.ರಾಮನ್ ನಗರ ವಾರ್ಡ್, ರಾಮಸ್ವಾಮಿ ಪಾಳ್ಯ ವಾರ್ಡ್, ಮಾರುತಿ ಸೇವಾ ನಗರ ವಾರ್ಡ್, ದೊಮ್ಮಲೂರು ವಾರ್ಡ್, ಸಂಪಂಗಿರಾಮನಗರ ವಾರ್ಡ್
ಸೌಥ್ ಝೋನ್
ಸುಧಾಮನಗರ ವಾರ್ಡ್, ಕರೀಸಂದ್ರ ವಾರ್ಡ್, ಈಜಿಪುರ ವಾರ್ಡ್, ಗುರಪ್ಪನಪಾಳ್ಯ ವಾರ್ಡ್, ಅತ್ತಿಗುಪ್ಪೆ ವಾರ್ಡ್, ಶಾಕಾಂಬರಿ ನಗರ ವಾರ್ಡ್, ಜೆ.ಪಿ.ನಗರ ವಾರ್ಡ್, ಬಾಪೂಜಿನಗರ ವಾರ್ಡ್, ಹೊಸಹಳ್ಳಿ ವಾರ್ಡ್
ವೆಸ್ಟ್ ಝೋನ್
ನಾಗಪುರ ವಾರ್ಡ್, ಸುಭಾಶ್ ನಗರ ವಾರ್ಡ್, ಶಿವನಗರ ವಾರ್ಡ್, ಪಾದರಾಯನಪುರ ವಾರ್ಡ್, ಕೆ.ಆರ್.ಮರ್ಕೆಟ್ ವಾರ್ಡ್
ಯಲಹಂಕ ಝೋನ್
ಥಣಿಸಂದ್ರ ವಾರ್ಡ್, ಬ್ಯಾಟರಾಯನಪುರ ವಾರ್ಡ್
ಆರ್ ಆರ್ ನಗರ ಝೋನ್
ಆರ್. ಆರ್. ನಗರ ವಾರ್ಡ್
Related Article
ಕೊರೋನಾ ವೈರಸ್: ಕರ್ನಾಟಕದ 8 ಜಿಲ್ಲೆ ಸೇರಿ ದೇಶಾದ್ಯಂತ 170 ಜಿಲ್ಲೆಗಳು ಹಾಟ್ ಸ್ಪಾಟ್ ಎಂದು ಘೋಷಿಸಿದ ಕೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


