ರಾಜ್ಯ

ಮೆರವಣಿಗೆ,ಪ್ರತಿಭಟನೆಗಳಿಗೆ ಅನುಮತಿ ಕಡ್ಡಾಯ:ಪೊಲೀಸ್ ಆಯುಕ್ತರ ಆದೇಶ

ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದಾಗಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ, ನೌಕರಸ್ಥರಿಗೆ, ವ್ಯಾಪಾರಿ ವರ್ಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಮೆರವಣಿಗೆಗಳ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಮೆರವಣಿಗೆ,ಪ್ರತಿಭಟನೆಗಳಿಗೆ ಅನುಮತಿ ಕಡ್ಡಾಯ:ಪೊಲೀಸ್ ಆಯುಕ್ತರ ಆದೇಶ
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
Published On :

ಬೆಂಗಳೂರು: ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದಾಗಿ ವಾಹನ ಸಂಚಾರ ದಟ್ಟಣೆ ಉಂಟಾಗಿ  ಸಾರ್ವಜನಿಕರಿಗೆ, ನೌಕರಸ್ಥರಿಗೆ, ವ್ಯಾಪಾರಿ ವರ್ಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಮೆರವಣಿಗೆಗಳ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಸಭೆ ಹಾಗೂ ಮೆರವಣಿಗೆ ಅನುಮತಿ ಹಾಗೂ ನಿಯಂತ್ರಣ( ಬೆಂಗಳೂರು ನಗರ) ಆದೇಶ 2009 ಎಂಬ ಆದೇಶದಡಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ನಗರದಲ್ಲಿ ರಾಜಕೀಯ, ಧಾರ್ಮಿಕ ಸಂಘಟನೆ ಸೇರಿ ಇತರ ವ್ಯಕ್ತಿಗಳು ಪ್ರತಿಭಟನೆ, ಮೆರವಣಿಗೆ ಏರ್ಪಡಿಸುವ ಮುನ್ನ ಕರ್ನಾಟಕ ಪೊಲೀಸ್ ಕಾಯ್ದೆ 31 (ಐ)( ಒ) ಅಡಿಯಲ್ಲಿ ಸಭೆ ಹಾಗೂ ಮೆರವಣಿಗೆಗಳಿಗೆ  ಅನುಮತಿ ಹಾಗೂ ನಿಯಂತ್ರಣ (ಬೆಂಗಳೂರು ನಗರ) ಆದೇಶ -2009 ಎಂಬ ಆದೇಶದ ಪ್ರಕಾರ ಸಭೆ ಹಾಗೂ ಮೆರವಣಿಗೆ ಆಯೋಜಿಸುವ ಸಂಘಟನಕಾರರು , ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ  11 ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.