ರಾಜ್ಯಮೆರವಣಿಗೆ,ಪ್ರತಿಭಟನೆಗಳಿಗೆ ಅನುಮತಿ ಕಡ್ಡಾಯ:ಪೊಲೀಸ್ ಆಯುಕ್ತರ ಆದೇಶ
ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದಾಗಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ, ನೌಕರಸ್ಥರಿಗೆ, ವ್ಯಾಪಾರಿ ವರ್ಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಮೆರವಣಿಗೆಗಳ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.