ರಾಜ್ಯ

ಹಾಸನ: ಪತ್ನಿಯ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದ ಪ್ರಿಯಕರ, ಆತನ ತಂದೆಯನ್ನು ಕೊಚ್ಚಿ ಕೊಂದ ಪತಿ!

ತನ್ನ ಪತ್ನಿಯ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟನೆಂಬ ಕಾರಣಕ್ಕೆ ಪತಿಯೊಬ್ಬ ಯುವಕ ಹಾಗೂ ಆತನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗುಡ್ಡದ ಕೆಂಗನಹಳ್ಳಿಯಲ್ಲಿ ನಡೆದಿದೆ.

ಹಾಸನ: ಪತ್ನಿಯ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದ ಪ್ರಿಯಕರ, ಆತನ ತಂದೆಯನ್ನು ಕೊಚ್ಚಿ ಕೊಂದ ಪತಿ!
ಸಂಗ್ರಹ ಚಿತ್ರ
Published On :

ಹಾಸನ: ತನ್ನ ಪತ್ನಿಯ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟನೆಂಬ ಕಾರಣಕ್ಕೆ ಪತಿಯೊಬ್ಬ ಯುವಕ ಹಾಗೂ ಆತನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗುಡ್ಡದ ಕೆಂಗನಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ್ (28) ಮತ್ತು ಆತನ ತಂದೆ ಗಂಗಪ್ಪ(70)  ಎಂಬುವವರು ಹತ್ಯೆಯಾಗಿರುವ ದುರ್ದೈವಿಗಳು. ಮಂಜುನಾಥ್ ಕೃಷ್ಣಪ್ಪ ಎಂಬುವವರ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದನೆಂದು ಹೇಳಲಾಗಿದ್ದು ಆಕೆಯ ಅಶ್ಲೀಲ ಚಿತ್ರ ಹಾಗೂ ವೀಡಿಯೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು.

ಈ ಕೃತ್ಯದಿಂದ ಕೋಪಗೊಂಡ ಕೃಷ್ಣಪ್ಪ ತನ್ನ ಸಂಗಡಿಗರೊಡನೆ ತೆರಳಿ ಮಂಜುನಾಥ್ ಹಾಗೂ ಗಂಗಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ಕುರಿತಂತೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.s

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.