ರಾಜ್ಯ

ಕರುನಾಡ ಚೆಲುವೆ ನಿಶಾಗೆ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿ

ಬೀದರ್ ಜಿಲ್ಲೆ ಕುಗ್ರಾಮದಿಂದ ಬಂದ ಯುವತಿಯೊಬ್ಬಳು ಒಂಡೋನೇಷಿಯಾದಲ್ಲಿ ನಡೆದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ 2019 ಪ್ರಶಸ್ತಿ ಗೆಲ್ಲುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ.

ಕರುನಾಡ ಚೆಲುವೆ ನಿಶಾಗೆ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿ
ನಿಶಾ ತಾಳಂಪಳ್ಲಿ
Published On :

ಬೀದರ್: ಬೀದರ್ ಜಿಲ್ಲೆ ಕುಗ್ರಾಮದಿಂದ ಬಂದ ಯುವತಿಯೊಬ್ಬಳು ಒಂಡೋನೇಷಿಯಾದಲ್ಲಿ ನಡೆದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ 2019 ಪ್ರಶಸ್ತಿ ಗೆಲ್ಲುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ. ಬೀದರ್ ನ ಹುಮನಾಬಾದ್ ತಾಲೂಕಿನ ಧುಮ್ಮನಸೂರು ಗ್ರಾಮದ ಚೆಲುವೆ ನಿಶಾ ತಾಳಂಪಳ್ಲಿ ಈ ಸಾಲಿನ "ಮಿಸ್ ಇಂಡಿಯಾ" ಆಗಿ ಹೊರಹೊಮ್ಮಿದ್ದಾರೆ.

ದೇಶದ ವಿವಿಧೆಡೆಯಿಂದ 30 ಜನ ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಕನ್ನಡ ನಾಡಿನಿಂದ ಆಯ್ಕೆಯಾಗಿದ್ದ ಏಕೈಕ ಸುಂದರಿ ನಿಶಾ ಆಗಿದ್ದರು. ”

ಎನ್.ಇ..ಕೆ.ಆರ್.ಟಿ.ಸಿ. ಹುಮನಾಬಾದ್ ಘಟಕದಲ್ಲಿ ಕ್ಯಾಶಿಯರ್ ಆಗಿರುವ ತಂದೆ ಶ್ರೀನಿವಾಸ ತಾಳಂಪಳ್ಳಿ ಹಾಗೂ ತಾಇ ಇಂದುಮತಿಯವರ ಪುತ್ರಿಯಾದ ನಿಶಾ  ಪಿಯುಸಿ ಮುಗಿಸಿ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಎವಿಎಷನ್  ಮಾಡಿದ್ದಾರೆ. ಅಲ್ಲಿ ಒಂದು ತಿಂಗಳ ತರಬೇತಿ ಹೊಂದಿದ್ದರು.

ನವೆಂಬರ್ ೧೪ರಿಂಡ ೧೮ರವರೆಗೆ ಈ ಸ್ಪರ್ಧೆ ನಡೆದಿದ್ದು ಸೌಂದರ್ಯ ಹಾಗೂ ಪ್ರತಿಭೆಗಳೆರಡರಲ್ಲಿಯೂ ಸವಾಲೆಸೆದು ನಿಶಾ ಮಿಸ್ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.