ರಾಜ್ಯ

ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತೆ ಮನೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ

ಆಟೊ ಚಾಲಕನೊಬ್ಬ ಮೊಬೈಲ್‌ಫೋನ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. ..

ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತೆ ಮನೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಆಟೊ ಚಾಲಕನೊಬ್ಬ ಮೊಬೈಲ್‌ಫೋನ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. 
ಸುಬೇದಾರಪಾಳ್ಯ ನಿವಾಸಿ ವೆಂಕಟೇಶ್‌(38) ಮೃತ ವ್ಯಕ್ತಿ. ಮನೆ ಸಮೀಪದಲ್ಲಿ ವಾಸವಿದ್ದ ವಿಚ್ಛೇದಿತ ಮಹಿಳೆ ಜೊತೆ ವಾಸವಿದ್ದ. ಅಧಿಕವಾಗಿ ಸಾಲ ಮಾಡಿಕೊಂಡಿದ್ದ ಆದರೆ, ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ. 
ಬೆಳಗ್ಗಿನ ಜಾವ ಸುಮಾರು 4.30ಕ್ಕೆ ತನ್ನ ಸ್ನೇಹಿತೆ ಯಶೋಧಾ ಮನೆಗೆ ತೆರಳಿದ್ದ ವೆಂಕಟೇಶ್ ಹಾಲು ತಂದು ಟೀ ಮಾಡಿಕೊಡುವಂತೆ ಕೇಳಿದ್ದಾನೆ, ಆಕೆ ಹೊರ ಹೋದ ಬಳಿಕ ಬಾಗಿಲು ಹಾಕಿಕೊಂಡು ವಿಡಿಯೋ ಮಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಯಶೋಧಾ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಬಂದು ಬಾಗಿಲು ಒಡೆದು ನೋಡಿದಾಗ ವೆಂಕಟೇಶ್ ಪ್ಯಾನ್ ಗೆ ನೇಣು ಹಾಕಿಕೊಂಡಿದ್ದ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ.
'ನನ್ನ ಸಾವಿಗೆ ನಾನೇ ಕಾರಣ. ಯಾರೂ ಕಾರಣರಲ್ಲ,  ನನ್ನ ಆಟೋವನ್ನು ಯಾರಾದರೂ ಖರೀದಿಸಿ ಅದರಲ್ಲಿ 40 ಸಾವಿರ ರೂ. ಸ್ನೇಹಿತೆಗೆ ಕೊಡಿ ಎಂದು ಆಟೋ ಚಾಲಕ ಆತ್ಮಹತ್ಯೆಗೆ ಮುನ್ನ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾನೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.