ಕರ್ನಾಟಕದಲ್ಲಿ 14 ಸಾವಿರ ಕೋಟಿ ರೂ. ಹೂಡಿಕೆಯಿಂದ 13 ಸಾವಿರ ಉದ್ಯೋಗ ಸೃಷ್ಟಿ
ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಹೂಡಿಕೆ ಮತ್ತು 13 ಸಾವಿರ ಜನರಿಗೆ ಉದ್ಯೋಗ ...

Published On :
ಬೆಂಗಳೂರು: ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಹೂಡಿಕೆ ಮತ್ತು 13 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ 14 ಹೊಸ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಕೈಗಾರಿಕಾ ಸಚಿವ ಕೆ ಜೆ ಜಾರ್ಜ್ ನೇತೃತ್ವದ ಏಕ ಗವಾಕ್ಷಿ ಅನುಮೋದನಾ ಸಮಿತಿ ಆಟೋಮೊಬೈಲ್ ಗಳು, ಉತ್ಪಾದನೆ, ಔಷಧೀಯ, ಏರೋಸ್ಪೇಸ್ ಘಟಕ ಉತ್ಪಾದನೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೈಗಾರಿಕಾ ಇಲಾಖೆಯಿಂದ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ಮೈಸೂರಿನ ಜ್ಯುಬಿಲೆಂಟ್ ಬಯೊಸಿಸ್ ಲಿಮಿಟೆಡ್ ಮತ್ತು ಆಟೊಮೊಟಿವ್ ಆಕ್ಸೆಲ್ಸ್ ಲಿಮಿಟೆಡ್ ಅತಿ ಹೆಚ್ಚು ಹೂಡಿಕೆ ಮಾಡುವ ಪ್ರಸ್ತಾವನೆಗೆ ಸಮಿತಿ ಅನುಮತಿ ನೀಡಿದೆ.
ಬೆಂಗಳೂರು ಮೂಲದ ಜ್ಯುಬಿಲೆಂಟ್ ಜೀವ ವಿಜ್ಞಾನ ಉಪ ಅಂಗಸಂಸ್ಥೆಯಾಗಿರುವ ಜ್ಯುಬಿಲೆಂಟ್ ಬಯೊಸಿಸ್, ಸನೊಫಿಯ ಕೇಂದ್ರ ನರಮಂಡಲದ ಚಿಕಿತ್ಸಕ ಪ್ರದೇಶದಲ್ಲಿ ಸಮಗ್ರ ಔಷಧಿ ಸಂಶೋಧನೆ ಸಹಯೋಗ.ಕೇಂದ್ರ ನರಮಂಡಲದ ಚಿಕಿತ್ಸಕ ಪ್ರದೇಶದಲ್ಲಿ ಸನೊಫಿಯ ಕೇಂದ್ರ ನರಮಂಡಲದ ಚಿಕಿತ್ಸಕ ಪ್ರದೇಶದಲ್ಲಿ ಸಮಗ್ರ ಔಷಧಿ ಸಂಶೋಧನೆ ಸಹಯೋಗದಲ್ಲಿ ಸಮಗ್ರ ಔಷಧಿ ಸಂಶೋಧನೆಯನ್ನು ಇತ್ತೀಚೆಗೆ ಪ್ರಕಟಿಸಿತ್ತು.
ಸದ್ಯದಲ್ಲಿಯೇ ಈ ಸಂಸ್ಥೆಗಳು ಯೋಜನೆಗಳಿಗೆ ಸಂಬಂಧಪಟ್ಟ ವಿವರಗಳನ್ನು ಬಿಡುಗಡೆ ಮಾಡಲಿವೆ. ಈಗಿರುವ ವ್ಯವಸ್ಥೆಗಳನ್ನು ವಿಸ್ತರಿಸುವ ಕುರಿತು ಸಹ ಕೆಲವು ಪ್ರಸ್ತಾವನೆಗಳಿವೆ, ಬಹುತೇಕ ಹೊಸ ಯೋಜನೆಗಳಾಗಿದ್ದು ಬೆಂಗಳೂರು ಸುತ್ತಮುತ್ತ ಬರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


