ರಾಜ್ಯ

ಮೈಸೂರು: ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಹುಭಾಷಾ ನಟ ಪ್ರಭುದೇವ!

ಇಂದಿನಿಂದ ಅಕ್ಟೋಬರ್ 18 ರವರೆಗೂ ಯುವ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮೈಸೂರು: ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಹುಭಾಷಾ ನಟ ಪ್ರಭುದೇವ!
ನಟ ಪ್ರಭುದೇವ
Published On :

ಮೈಸೂರು: ಭಾರತದ ಮೈಕೆಲ್ ಜಾಕ್ಸನ್ ಎಂದೇ ಜನಪ್ರಿಯರಾದ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಬಹುಭಾಷಾ ನಟ ಪ್ರಭುದೇವ ಅವರಿಂದು ತಾಯಿ ಜೊತೆ ಆಗಮಿಸಿ ಸುತ್ತೂರು ಮಠಕ್ಕೆ (Sutturu Mutt) ಭೇಟಿ ನೀಡಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ.

ನಾಡಿನೆಲ್ಲೆಡೆ ದಸರಾ ಸಂಭ್ರಮ ಮಾಡಿದ್ದು, ಮೈಸೂರು ವಿಶ್ವವಿಖ್ಯಾತ ದಸರಾಗೆ ಸಾಕ್ಷಿಯಾಗುತ್ತಿದೆ. ಮಹಾರಾಜ ಕಾಲೇಜು ಮೈದಾನ ಮತ್ತು ಅರಮನೆ ಆವರಣದಲ್ಲಿ ಇಂದು ಯುವ ದಸರಾಕ್ಕೆ ಪ್ರಭುದೇವ ಚಾಲನೆ ನೀಡಲಿದ್ದಾರೆ.

ಇಂದಿನಿಂದ ಅಕ್ಟೋಬರ್ 18 ರವರೆಗೂ ಯುವ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಹಿನ್ನೆಲೆಯಲ್ಲಿ ಮೈಸೂರಿಗೆ ಇಂದು ಆಗಮಿಸಿದ ಪ್ರಭುದೇವ ಅವರು, ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಭುದೇವ, ಯುವ ದಸರಾ ಉದ್ಘಾಟಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದರು.

ದೀರ್ಘಕಾಲದ ಭಕ್ತ: ಪ್ರಭುದೇವ ಅವರು ಸುತ್ತೂರು ಮಠ ಮತ್ತು ಸ್ವಾಮೀಜಿಯವರೊಂದಿಗೆ ನಿಕಟ ಹಾಗೂ ದೀರ್ಘಕಾಲದ ಬಾಂಧವ್ಯವನ್ನು ಹೊಂದಿದ್ದಾರೆ. ತಾವು ಮಠದ ಒಬ್ಬ ನಿಷ್ಠಾವಂತ ಅನುಯಾಯಿ ಎಂದು ಪರಿಗಣಿಸುವುದಲ್ಲದೆ, ಮಠದಿಂದ ಬರುವ ಆಹ್ವಾನಗಳಿಗೆ ಯಾವಾಗಲೂ ಆದ್ಯತೆ ನೀಡುವುದಾಗಿ ಅವರು ಈ ಹಿಂದೆ ಅನೇಕ ಬಾರಿ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.