ರಾಜ್ಯ

ಚಳಿ ನೆಪ: ಬೆಡ್ ಶೀಟ್ ಹೊದ್ದು ಕುಳಿತು ಬಟ್ಟೆ ಮಳಿಗೆಗೆ ಕನ್ನ ಹಾಕಿದ ಮಹಿಳಾ ಗ್ಯಾಂಗ್!

ಚಳಿಯೆಂದು ಅಂಗಡಿ ಮುಂದೆ ಬೆಂಕಿ ಕಾಯಿಸಿಕೊಳ್ಳಲು ಬೆಡ್'ಶೀಟ್ ಹೊದ್ದು ಕುಳಿತಿದ್ದ 6 ಮಂದಿ ಮಹಿಳೆಯರ ಗ್ಯಾಂಗ್'ವೊಂದು ಬಟ್ಟೆ ಮಳಿಗೆಯ ಶಟರ್ ಮುರಿದು ಕನ್ನ ಹಾಕಿರುವ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ...

ಚಳಿ ನೆಪ: ಬೆಡ್ ಶೀಟ್ ಹೊದ್ದು ಕುಳಿತು ಬಟ್ಟೆ ಮಳಿಗೆಗೆ ಕನ್ನ ಹಾಕಿದ ಮಹಿಳಾ ಗ್ಯಾಂಗ್!
ಸಂಗ್ರಹ ಚಿತ್ರ
Published On :
ಬೆಂಗಳೂರು: ಚಳಿಯೆಂದು ಅಂಗಡಿ ಮುಂದೆ ಬೆಂಕಿ ಕಾಯಿಸಿಕೊಳ್ಳಲು ಬೆಡ್'ಶೀಟ್ ಹೊದ್ದು ಕುಳಿತಿದ್ದ 6 ಮಂದಿ ಮಹಿಳೆಯರ ಗ್ಯಾಂಗ್'ವೊಂದು ಬಟ್ಟೆ ಮಳಿಗೆಯ ಶಟರ್ ಮುರಿದು ಕನ್ನ ಹಾಕಿರುವ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ. 
ಚಿಕ್ಕಪೇಟೆಯ ಭೈರಪ್ಪ ಆ್ಯಂಡ್ ಸನ್ಸ್ ಸಿಲ್ಕ್ಸ್ ಬಟ್ಟೆ ಅಂಗಡಿಯಲ್ಲಿ ಜ.2 ರಂದು ಘಟನೆ ನಡೆದಿದ್ದು, ರೂ.4.5 ಲಕ್ಷ ದರೋಗೆ ನಡೆಸಲಾಗಿದೆ ಎಂದು ಸಿ.ಟಿ.ಮಾರುಕಟ್ಟೆ ಠಾಣೆಯಲ್ಲಿ ಅಂಗಡಿ ಮಾಲೀಕರು ದೂರು ನೀಡಿದ್ದಾರೆ. 
ಜ.1ರಂದು ರಾತ್ರಿ ಅಂಗಡಿ ಮಾಲೀಕ ಎಂದಿನಂತೆ ಬೀಗ ಹಾಕಿಕೊಂಡು ಹೋಗಿದ್ದರು. ಜ.2ರ ಬೆಳಗಿನ ಜಾವ 5.40ರ ಸುಮಾರಿಗೆ ಬೆಡ್ ಶೀಟ್ ಹೊದ್ದುಕೊಂಡಿದ್ದ 6 ಮಹಿಳೆಯರು ಒಬ್ಬೊಬ್ಬರಾಗಿ ಭೈರಪ್ಪ ಸಿಲ್ಕ್ಸ್'ನ ಮೆಟ್ಟಿಲುಗಳ ಮೇಲೆ ಬಂದು ಕುಳಿತುಕೊಂಡಿದ್ದಾರೆ. ಈ ವೇಳೆ ಅಂಗಡಿಯ ಮುಂಭಾಗದಲ್ಲಿ ಬೆಂಕಿ ಹಾಕಿದ್ದು, ಕೆಲವರು ಬೆಂಕಿ ಕಾಯಿಸುವ ನೆಪದಲ್ಲಿ ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದರೆ, ಇನ್ನು ಕೆಲವರು ಶೆಟರ್'ಗೆ ಹೊಂದಿಕೊಂಡಂತೆ ಕುಳಿತುಕೊಂಡಿದ್ದಾರೆ. ಇದರಿಂದ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಚಳಿ ಕಾಯಿಸಲು ಮಹಿಳೆಯರು ಕುಳಿತಿದ್ದಾರೆಂದು ತಿಳಿದಿದ್ದಾರೆ. 
ಈ ವೇಳೆ ಶೆಟರ್ ಮುರಿದು ಒಳ ನುಗ್ಗಿರುವ ಕಳ್ಳಿಯರು ತಮ್ಮ ಕೈಚಳಕ ತೋರಿಸಿದ್ದಾರೆ. ಅಷ್ಟರಲ್ಲಿ ಒಬ್ಬಾಕೆ ತಮ್ಮ ತಲೆ ಮೇಲೆ ಸಿಸಿಟಿವಿ ಇರುವುದನ್ನು ಗಮಿಸಿ ಉಳಿದವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಎಲ್ಲರೂ ಸೆರಗಿನಿಂದ ಮುಖ ಮುಚ್ಚಿಕೊಂಡಿದ್ದಾರೆ. ಕೆಲ ಸಮಯದ ನಂತರ ಅಲ್ಲಿಂದ ಎದ್ದು ಹೋಗಿದ್ದಾರೆ. 
ಬೆಳಿಗ್ಗೆ 9.30ರ ಸುಮಾರಿಗೆ ಎಂದಿನಂತೆ ಅಂಗಡಿ ಮಾಲೀಕರು ಬಂದಾಗ ಶೆಟರ್ ಹಾಗೂ ಒಳಗೆ ಕ್ಯಾಷ್ ಬಾಕ್ಸ್ ಮುರಿದಿರುವುದು ಬೆಳಕಿಗೆ ಬಂದಿದೆ. 
ರೂ.4.5 ಲಕ್ಷ ಕಳ್ಳತನವಾಗಿದ್ದು, ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಮಹಿಳಾ ಗ್ಯಾಂಗ್"ನ ಕೃತ್ಯ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ನಲ್ಲಿ ಒಬ್ಬ ಬಾಲಕ ಕೂಡ ಇದ್ದಾನೆ. ಮಳಿಗೆಯ ಒಳಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯರ ಮುಖ ಸ್ಪಷ್ಟವಾಗಿ ಕಾಣಿಸಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.