ಬೆಂಗಳೂರು: ಪ್ರೇಯಸಿಯನ್ನು ಖುಷಿ ಪಡಿಸಲು 'ಬಜಾಜ್ ಪಲ್ಸರ್' ಬೈಕ್ ಕದ್ದ ಭೂಪ!
ಮೋಜಿನ ಜೀವನ ನಡೆಸಲು ಹಾಗೂ ಪ್ರೇಯಸಿಯನ್ನು ಖುಷಿ ಪಡಿಸಲು ದ್ವಿಚಕ್ರವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

Published On :
ಬೆಂಗಳೂರು: ಮೋಜಿನ ಜೀವನ ನಡೆಸಲು ಹಾಗೂ ಪ್ರೇಯಸಿಯನ್ನು ಖುಷಿ ಪಡಿಸಲು ದ್ವಿಚಕ್ರವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪ್ರೇಯಸಿಯನ್ನು ನಂದಿ ಬೆಟ್ಟಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಇತ್ತೀಚಿಗೆ ಬಜಾಜ್ ಪಲ್ಸರ್ ಕದ್ದಿದ್ದ ಕಾರ್ತಿಕ್(26)ನನ್ನು ಮಾಲು ಸಮೇತ ಬಂಧಿಸಿರುವ ಪೊಲೀಸರು ಆತನಿಂದ 6.15 ಲಕ್ಷ ಬೆಲೆಬಾಳುವ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಾಹಿತನಾಗಿದ್ದು, ಒಂದು ಮಗುವನ್ನು ಹೊಂದಿರುವ ಆರೋಪಿ, ಬಜಾಜ್ ಪಲ್ಸರನ್ನು ಪ್ರೇಯಸಿ ಜತೆಗೆ ಜಾಲಿ ರೇಡ್‍ಗಾಗಿ ಕದ್ದರೆ, ಉಳಿದ ದ್ವಿಚಕ್ರವಾಹನಗಳನ್ನು ಕದ್ದು, ಮಾರಾಟ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಈ ಹಿಂದೆಯೂ ಆತ ದ್ವಿಚಕ್ರವಾಹನ ಕಳವಿನ ಆರೋಪದಲ್ಲಿಯೇ ಜೈಲು ಸೇರಿದ್ದ. ಬಿಡುಗಡೆಯ ನಂತರವೂ ತನ್ನ ಚಾಳಿ ಮುಂದುವರಿಸಿದ್ದ ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


