ರಾಜ್ಯ

ರೌಡಿಗಳ ಜೊತೆ ಬರ್ತ್ ಡೇ: ಪೊಲೀಸ್ ಅಧಿಕಾರಿ ಪುತ್ರ ನಾಯಿ ಗಿರಿ ಬಂಧನ

ನಡು ರಸ್ತೆಯಲ್ಲಿಯೇ ರೌಡಿ ಶೀಟರ್ ಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪೊಲೀಸಪ್ಪನ ಪುತ್ರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

ರೌಡಿಗಳ ಜೊತೆ ಬರ್ತ್ ಡೇ: ಪೊಲೀಸ್ ಅಧಿಕಾರಿ ಪುತ್ರ ನಾಯಿ ಗಿರಿ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ನಡು ರಸ್ತೆಯಲ್ಲಿಯೇ ರೌಡಿ ಶೀಟರ್ ಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪೊಲೀಸಪ್ಪನ ಪುತ್ರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಎಎಸ್‍ಐ ಮಗ ಗಿರಿ ಅಲಿಯಾಸ್ ಗೋಲ್ಡ್ ಗಿರಿ, ನಾಯಿ ಗಿರಿ ಎಂದು ಗುರುತಿಸಲಾಗಿದೆ. ಈತನ ಕೊರಳು ಸಂಪೂರ್ಣವಾಗಿ ಚಿನ್ನದ ಸರಗಳಿಂದ ಕೂಡಿದ್ದು, ತನ್ನ ನಾಯಿಗೂ ಗೋಲ್ಡ್ ಬೆಲ್ಟ್ ಹಾಕಿದ್ದಾನೆ.

ಈತ ಮಲ್ಲತ್ತಹಳ್ಳಿಯ ನಡು ರಸ್ತೆಯಲ್ಲೇ ಅದ್ಧೂರಿಯಾಗಿ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ರಸ್ತೆ ಮಧ್ಯೆಯೇ ಪುಡಾರಿಗಳು ಅದ್ಧೂರಿ ಸ್ವಾಗತ ಮಾಡಿದ್ದಾರೆ. ಅಲ್ಲದೇ, ಹುಟ್ಟು ಹಬ್ಬದ ಸಂಭ್ರಮದ ವೇಳೆ ಸಾಲು ಸಾಲು ರೌಡಿಶೀಟರ್ ಗಳು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. 

ಈ ಬಗ್ಗೆ ಮಾಹಿತಿ ಪಡೆದ ಜ್ಞಾನ ಭಾರತಿ ಪೊಲೀಸರು ಬರ್ತ್ ಡೇ ಆಚರಣೆ ನಡೆಯುತ್ತಿದ್ದಾಗ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗಿರಿ ಅಭಿಮಾನಿಗಳು ಪಾರ್ಟಿಯಿಂದ ಕಾಲ್ಕಿತ್ತಿದ್ದಾರೆ.

ಸದ್ಯ ಗಿರಿಯನ್ನು ಜ್ಞಾನ ಭಾರತಿ ಪೊಲೀಸರು ವಶಕ್ಕೆ ಪಡೆದಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.