ರಾಜ್ಯ

ರಸ್ತೆ ಗುಂಡಿ ಮುಚ್ಚಲು ಇಂದು ಕೊನೆ ದಿನ: ಬಿಬಿಎಂಪಿಗೆ ಕಾಡಲಿದ್ದಾನೆಯೇ ಮಳೆರಾಯ?

ನಗರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಲು ಹೈಕೋರ್ಟ್ ನೀಡಿದ್ದ ಗಡುವಿಗೆ ಭಾನುವಾರ ಕೊನೆಯ ದಿನವಾಗಿದ್ದು, ಗಡುವಿನೊಳಗಾಗಿ ರಸ್ತೆ ಗುಂಡಿಗಳಿಗೆ ತೇಪ ಹಚ್ಚಲು ಬಿಡುವಿಲ್ಲದೆ ಬಿಬಿಎಂಪಿ ತನ್ನ ಕಾರ್ಯಗಳನ್ನು ಮುಂದುವರೆಸಿದೆ. ಈ ನಡುವೆ ಬಿಬಿಎಂಪಿ ಅಧಿಕಾರಿಗಳಿಗೆ ಮಳೆರಾಯನ ಭೀತಿ ಎದುರಾಗಿದೆ...

ರಸ್ತೆ ಗುಂಡಿ ಮುಚ್ಚಲು ಇಂದು ಕೊನೆ ದಿನ: ಬಿಬಿಎಂಪಿಗೆ ಕಾಡಲಿದ್ದಾನೆಯೇ ಮಳೆರಾಯ?
Published On :
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಲು ಹೈಕೋರ್ಟ್ ನೀಡಿದ್ದ ಗಡುವಿಗೆ ಭಾನುವಾರ ಕೊನೆಯ ದಿನವಾಗಿದ್ದು, ಗಡುವಿನೊಳಗಾಗಿ ರಸ್ತೆ ಗುಂಡಿಗಳಿಗೆ ತೇಪ ಹಚ್ಚಲು ಬಿಡುವಿಲ್ಲದೆ ಬಿಬಿಎಂಪಿ ತನ್ನ ಕಾರ್ಯಗಳನ್ನು ಮುಂದುವರೆಸಿದೆ. ಈ ನಡುವೆ ಬಿಬಿಎಂಪಿ ಅಧಿಕಾರಿಗಳಿಗೆ ಮಳೆರಾಯನ ಭೀತಿ ಎದುರಾಗಿದೆ. 
ನಗರದಲ್ಲಿ ಮೋಡ ಮುಚ್ಚಿದ ವಾತಾವರಣ ಮುಂದುವರೆಯಲಿದ್ದು, ಭಾನುವಾರ ಕೂಡ ಮಳೆಯಾಗುವ ಸಾಧ್ಯತೆಗಳಿವೆ ಎಂದು ಈ ಹಿಂದೆ ಹವಾಮಾನ ಇಲಾಕೆ ಮಾಹಿತಿ ನೀಡಿತ್ತು. ಹೀಗಾಗಿ ಬಿಬಿಎಂಪಿಗೆ ಆತಂಕ ಶುರುವಾಗಿದೆ.
ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಬಿಬಿಎಂಪಿ ಈಗಾಗಲೇ ಗುಂಡಿಗಳನ್ನು ಮುಚ್ಚಿದ್ದು, ಮಳೆಯ ಹಿನ್ನಲೆಯಲ್ಲಿ ಗುಂಡಿಗಳು ಮತ್ತೆ ಬಾಯ್ತೆರೆದು ನಿಂತಿವೆ. ಎಂಜಿ ರಸ್ತೆಯಲ್ಲಿ ಶನಿವಾರವಷ್ಟೇ ಮುಚ್ಚಿದ್ದ ಗುಂಡಿಗಳಲ್ಲಿ ಸಂಜೆ ವೇಳೆಗೆ ನೀರು ತುಂಬಿರುವುದು ಕಂಡು ಬಂದಿತ್ತು. 
ಇಂದು ಕೂಡ ಮಳೆ ಬಂದಿದ್ದೇ ಆದರೆ, ಮತ್ತಷ್ಟು ರಸ್ತೆಗಳಲ್ಲೂ ಇದೇ ರೀತಿಯ ಪರಿಸ್ಥಿತಿಗಳು ಕಂಡು ಬರಲಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. 
ಶನಿವಾರ ರಾತ್ರಿ 8.30ರ ವೇಳೆಗೆ ಒಟ್ಟು 763 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಶುಕ್ರವಾರ ಮತ್ತು ಶನಿವಾರ ಎರಡೂ ದಿನಗಳೂ ಮಳೆಯಾದ ಹಿನ್ನಲೆಯಲ್ಲಿ ರಸ್ತೆಗಳಲ್ಲಿದ್ದ ಗುಂಡಿಗಳು ಮತ್ತೆ ಬಾಯ್ತೆರೆಯುವಂತಾಗಿತ್ತು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.