ರಾಜ್ಯ

ಗುರಾಯಿಸಿದ್ದನ್ನು ಪ್ರಶ್ನಿಸಿದ ಯುವತಿ: ನಡುರಸ್ತೆಯಲ್ಲೇ ಪ್ಯಾಂಟ್ ಬಿಚ್ತೇನೆ ನಿಂಗೇನು? ಎಂದು ಚಾಲಕನಿಂದ ಅಸಭ್ಯ ವರ್ತನೆ

ಗುರಾಯಿಸಿದ್ದನ್ನು ಪ್ರಶ್ನಿಸಿದ ಯುವತಿಯೊಬ್ಬಳೊಂದಿಗೆ ಆಟೋ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಅಶೋಕ ನಗರದ ಗರುಡಾ ಶಾಪಿಂಗ್ ಮಾಲ್ ಬಳಿ ನಡೆದಿದೆ...

ಗುರಾಯಿಸಿದ್ದನ್ನು ಪ್ರಶ್ನಿಸಿದ ಯುವತಿ: ನಡುರಸ್ತೆಯಲ್ಲೇ ಪ್ಯಾಂಟ್ ಬಿಚ್ತೇನೆ ನಿಂಗೇನು? ಎಂದು ಚಾಲಕನಿಂದ ಅಸಭ್ಯ ವರ್ತನೆ
ಸಂಗ್ರಹ ಚಿತ್ರ
Published On :
ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನಿಸಿದ ಯುವತಿಯೊಬ್ಬಳೊಂದಿಗೆ ಆಟೋ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಅಶೋಕ ನಗರದ ಗರುಡಾ ಶಾಪಿಂಗ್ ಮಾಲ್ ಬಳಿ ನಡೆದಿದೆ. 
ಈ ಕುರಿತಂತೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಘಟನೆ ಬಗ್ಗೆ ತನ್ನ ಅಳಲನ್ನು ತೋಡಿಕೊಂಡಿದ್ದು, ನಗರ ಪೊಲೀಸ್ ಖಾತಚೆಗೆ ಟ್ಯಾಗ್ ಮಾಡಿದ್ದಾರೆ. 
ಸಂತ್ರಸ್ತ ಯುವತಿ ತನ್ನ ಸ್ನೇಹಿತ ಜೊತೆಗ ಭಾನುವಾರ ಮಧ್ಯಾಹ್ನ ಅಸೋಕ್ ನಗರದಲ್ಲಿರುವ ಗರುಡ ಮಾಲ್'ಗೆ ತೆರಳಿದ್ದಾರೆ. ಮಾಲ್ ನಲ್ಲಿ ಶಾಪಿಂಗ್ ಮುಗಿಸಿಕೊಂಡು ಯುವತಿಯರಿಬ್ಬರು ಸಂಜೆ 5 ಗಂಟೆ ಸುಮಾರಿಗೆ ಮಾಲ್ ನಿಂದ ಹೊರ ಬಂದಿದ್ದಾರೆ. ಈ ವೇಳೆ ಅಲ್ಲಿಯೇ ಆಟೋ ನಿಲ್ದಾಣದಲ್ಲಿ ನಿಂತಿಲ್ಲ ಆರೋಪಿ ಯುವತಿಯನ್ನು ದುರುಗುಟ್ಟಿ ನೋಡಿದ್ದಾನೆ. ಬಳಿಕ ಯುವತಿ ಬಳಿ ಬಂದು ಮೈ-ಕೈ ಮುಟ್ಟಿಕೊಂಡು ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. 
ಆತನ ವರ್ತನೆಯನ್ನು ಯುವತಿ ಪ್ರಶ್ನಿಸಿದ್ದಾರೆ. ಈ ವೇಳೆ ಅಶ್ಲೀಲ ಪದಗಳಿಂದ ಬೈದಿದ್ದಾನೆ. ನನ್ನಿಷ್ಟ ನಾನು ಯಾರನ್ನಾದರೂ ಗುರಾಯಿಸುತ್ತೇನೆ. ನಡುರಸ್ತೆಯಲ್ಲಿಯೇ ಪ್ಯಾಂಟ್ ಬಿಚ್ಚಿ ಕುಣಿಯುತ್ತೇನೆ ನಿನಗೇನು? ಎಂದು ಪುನಃ ದುರುಗುಟ್ಟಿ ನೋಡಲು ಆರಂಭಿಸಿದ್ದಾನೆ. ಆದನ ವರ್ತನೆಯನ್ನು ವಿಡಿಯೋ ಮಾಡಿ, ಸಮೀಪದಲ್ಲಿಯೇ ಇದ್ದ ಪೇದೆಯೊಬ್ಬರಿಗೆ ತೋರಿಸಿದ್ದೆ. ಅಷ್ಟರಲ್ಲಿಯೇ ಆತ ಸ್ಥಳದಿಂದು ಹೊರಟು ಹೋಗಿದ್ದ ಎಂದು ಯುವತಿ ಹೇಳಿದ್ದಾರೆ. 
ಪ್ರಯಾಣಿಕರಿಗಾಗಿ ಕಾಯುವ ಸಮಯದಲ್ಲಿಯೇ ಈ ಚಾಲಕ ಈ ರೀತಿ ವರ್ತಿಸುತ್ತಾನೆ. ಒಂದು ವೇಳೆ ಯಾರಾದರೂ ಮಹಿಳೆಯರು ಆಟೋದಲ್ಲಿ ಪ್ರಯಾಣಿಸಿದರೆ ಅತ್ಯಾಚಾರವೆಸಗಲೂ ಆತ ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ ಆತನ ವಿರುದ್ಧ ತ್ವರಿತವಾಗಿ ಕ್ರಮ ಗೊಳ್ಳಿ ಎಂದು ದೂರಿನಲ್ಲಿ ಮಹಿಳೆ ಆಗ್ರಹಿಸಿದ್ದಾರೆ. 
ಯುವತಿಯ ಪೋಸ್ಟ್'ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಪ್ರಕರಣವನ್ನು ಅಶೋಕನಗರ ಠಾಣೆಗೆ ವರ್ಗಾಯಿಸಿಲಾಗಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.