ದಿನವೊಂದಕ್ಕೆ 40 ಸಿಗರೇಟ್ ಸೇದುತ್ತಿದ್ದೆ, ನೀವು ಧೂಮಪಾನಕ್ಕೆ ದಾಸರಾಗಬೇಡಿ: ಸಿದ್ದರಾಮಯ್ಯ
ಕೆಟ್ಟಚಟವಾದ ಸೀಗರೇಟು ಸೇದುವ ಹವ್ಯಾಸವನ್ನು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ,....

Published On :
ಮೈಸೂರು: ಕೆಟ್ಟ ಚಟವಾದ ಸೀಗರೇಟು ಸೇದುವ ಹವ್ಯಾಸವನ್ನು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ,. ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ತಾವು ಎಷ್ಟರ ಮಟ್ಟಿಗೆ ದೂಮಪಾನ ಚಟಕ್ಕೆ ದಾಸರಾಗಿದ್ದೆ ಎಂಬ ಬಗ್ಗೆ ಮಾಹಿತಿ ಬಿಚ್ಚಿಟ್ಟರು,
ಪ್ರತಿದಿನ ಸುಮಾರು 40 ಸಿಗರೇಟು ಸೇದುತ್ತಿದ್ದೆ. ನನ್ನ ಒಬ್ಬ ಸ್ನೇಹಿತ ವಿದೇಶದಿಂದ ದೊಡ್ಡ ಸಿಗರೇಟ್ ಪ್ಯಾಕ್ ತಂದುಕೊಟ್ಟ, ಒಂದೇ ದಿನದಲ್ಲಿ ನಾನು ಅದನ್ನು ಖಾಲಿ ಮಾಡಿದೆ, ಆನಂತರ ಅಪರಾಧಿ ಭಾವದಲ್ಲಿ ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡೆ, 31 ವರ್ಷದ ಹಿಂದೆ ಒಂದು ದಿನ ನಾನು ಧೂಮಪಾನ ಮಾಡುವುದನ್ನು ನಿಲ್ಲಿಸಿದೆ, ಈಗ ನನ್ನ ಪಕ್ಕ ಯಾರಾದರೂ ಧೂಮಪಾನ ಮಾಡಿದರೆ ಅದರ ವಾಸನೆ ಸಹ ನನ್ನಿಂದ ಸಹಿಸಸಾಗದು ಎಂದು ಹೇಳಿದ್ದಾರೆ.
ಕೆಟ್ಟ ಚಟಗಳಿಗೆ ಯುವ ಜನತೆ ಬೇಗ ದಾಸರಾಗುತ್ತಾರೆ, ಸಿಗರೇಟ್ ಮೇಲೆ ಅಪಾಯ ಎಂದು ಎಚ್ಚರಿಕೆ ಬರಹವಿದ್ದರೂ ಸೇವನೆ ಬಿಡುವುದಿಲ್ಲ, ಆದಷ್ಟು ಬೇಗನೇ ದೂಮಪಾನ ಬಿಡಬೇಕು ಹಾಗೂ ಆರೋಗ್ಯ. ತಪಾಸಣೆ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೇ ಕ್ಯಾನ್ಸರ್ ವಿಪರೀತ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಒಮ್ಮೆ ಕ್ಯಾನ್ಸರ್ ಬಂದರೇ ಅದು ಅಂತಿಮ ಹಂತ ತಲುಪಿದ ಮೇಲೆ ಏನೇ ಮಾಡಿದರೂ ಅದರಿಂದ ಬಚಾಲವಾಗಲು ಸಾಧ್ಯವಿಲ್ಲ, ಹೀಗಾಗಿ ಹಲವರು ಚಿಕಿತ್ಸೆಗಾಗಿ ವಿದೇಶಗಳಿಗೆ ತೆರಳುತ್ತಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


