ಬೆಂಗಳೂರು: ಕೇಬಲ್ ಕಡಿದು ನೆಲಕ್ಕಪ್ಪಳಿಸಿದ ಲಿಫ್ಟ್, 4 ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ
ನಗರದ ಅಪಾರ್ಟ್'ಮೆಂಟ್'ವೊಂದರಲ್ಲಿ ಅಳವಡಿಸಿದ್ದ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ...

Published On :
ಬೆಂಗಳೂರು: ನಗರದ ಅಪಾರ್ಟ್'ಮೆಂಟ್'ವೊಂದರಲ್ಲಿ ಅಳವಡಿಸಿದ್ದ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಫ್ರೇಜರ್ ಟೌನ್'ನ ಎಂ.ಎಂ.ರಸ್ತೆಯ ಸಿಲ್ವರ್ ನೆಸ್ಟ್ ಅಪಾರ್ಟ್'ಮೆಂಟ್ ನಲ್ಲಿ ಭಾನುವಾರ ರಾತ್ರಿ 9.30ರ ಸುಮಾರಿಗೆ ಏಕಾಏಕಿ ಕೇಬಲ್ ತುಂಡಾಗಿ 3ನೇ ಮಹಡಿಯಿಂದ ಲಿಫ್ಟ್ ನೆಲಕ್ಕೆ ಅಪ್ಪಳಿಸಿದೆ. ಅವಘಡದ ವೇಳೆ ಲಿಫ್ಟ್ ನಲ್ಲಿ ನಾಲ್ವರು ಯುವತಿಯರ ಪೈಕಿ 3 ಮಂದಿಗೆ ಗಂಭೀರವಾಗಿ ಗಾಯವಾಗಿದೆ.
ಗಾಯಾಳುಗಳಿಗೆ ಹಾಸ್ ಮ್ಯಾಟ್ ಆಸ್ಪತ್ರೆಯ ಪ್ರಧಾನ ಮೂಳೆತಜ್ಞ ಡಾ.ಥಾಮಸ್ ಚಾಂಡಿ ಹಾಗೂ ಡಾ.ಕರಣ್ ಕುಕ್ರೇಜಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಗಾಯಾಳುಗಳನ್ನು ಅಕ್ಷರಾ (20), ತನುಶ್ರೀ ಬೋಸ್ (24), ಫಲಾಖ್ ಪಟೇಲ್ (20) ಹಾಗೂ ಇಶಿಕಾ (20) ಎಂದು ಗುರ್ತಿಸಲಾಗಿದೆ.
ಗಾಯಾಳುಗಳಲ್ಲಿ 24 ವರ್ಷದ ತನುಶ್ರೀಯವರ ಹಣೆ, ಮೂಗು, ಮುಖಕ್ಕೆ ಪೆಟ್ಟಾಗಿದ್ದು, ಸೊಂಟದಲ್ಲಿ ಮೂಳೆ ಪುಡಿಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಇವರಿಗೆ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಂಗಳವಾರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಉಳಿದಂತೆ 20 ವರ್ಷದ ಅಕ್ಷರಾ ಅವರ ಎರಡೂ ಕಾಲುಗಳ ಮೂಳೆಗಳು ಮುರಿದಿದ್ದು, ಎಕ್ಸ್ ಟರ್ನಲ್ ಫಿಕ್ಸೇಟರ್ ಮತ್ತು ಕೆ-ವೈರ್ ಫಿಕ್ಸೇಟರ್ ಅಳವಡಿಸಿ, ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಇನ್ನು 20 ವರ್ಷದ ಫಲಾಖ್ ಪಟೇಲ್ ಅವರ ಬಲ ಪಾದದ ಮಣಿಕಟ್ಟು ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ.
20 ವರ್ಷದ ಇಶಿಕಾ ಸಣ್ಣ ಪುಟ್ಟ ಗಾಯಗಳಿಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅಜಿತ್ ಬೆನೆಡಿಕ್ಟ್ ರಾಯನ್ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಯುವತಿಯರು ಕಾನೂನು ಪದವಿ ವ್ಯಾಸಾಂಗ ಮಾಡುತ್ತಿದ್ದು, ಎರಡು ವಾರಗಳ ತರಬೇತಿಗಾಗಿ ಬೆಂಗಳೂರಿಗೆ ಆಗಮಿಸಿದ್ದ ಇವರು ಫ್ರೇಜರ್ ಟೌನ್'ನ ಸಿಲ್ವರ್ ನೆಸ್ಟ್ ಅಪಾರ್ಟ್'ಮೆಂಟ್ ನಲ್ಲಿ ತಂಗಿದ್ದರು. ಸೋಮವಾರದಿಂದ ತರಬೇತಿಗೆ ಹಾಜರಾಗಬೇಕಿತ್ತು. ಅಷ್ಟರಲ್ಲಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ತನುಶ್ರೀ ಬೋಸ್ ಅವರ ತಂದೆ ತಪನ್ ಬೋಸ್ ಅವರು, ಬೆಂಗಳೂರಿನಲ್ಲಿ ಇಂತಹ ಅಪಘಾತದಲ್ಲಿ ನನ್ನ ಮಗಳು ಗಾಯಗೊಂಡಿರುವುದು ನಿಜಕ್ಕು ನಾಚಿಗೇಡು. ಇಂಟರ್ನ್ ಶಿಪ್ ಮಗಳು ಬಹಳ ಉತ್ಸುಕಳಾಗಿದ್ದಳು. ಆದರೆ, ದುರಾದೃಷ್ಟವಶಾತ್ ದುರಂತದಲ್ಲಿ ಗಾಯಗೊಂಡಿದ್ದಾಳೆ. ಇದು ಕುಟುಂಬಕ್ಕೆ ಆಗಿರುವ ವೈಯಕ್ತಿಕ ನಷ್ಟ. ಈ ರೀತಿಯ ಸ್ಥಿತಿ ಯಾರಿಗೂ ಬರಬಾರದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


