ಲಿಫ್ಟ್

ಬೆಂಗಳೂರು: ಹೋಟೆಲ್ ಸರ್ವಿಸ್ ಲಿಫ್ಟ್‌ನಲ್ಲಿ ಸಿಲುಕಿ ಯುವಕನ ದಾರುಣ ಸಾವು..!
ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್‌ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್‌ನ ಬಾಗಿಲು ಏಕಾಏಕಿ ತೆರೆದಿದೆ.

ಪುಣೆ: ಇದ್ದಕ್ಕಿದ್ದಂತೆ ಸ್ಥಗಿತ; ಒಂದೂವರೆ ಗಂಟೆ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ 7 ವರ್ಷದ ಬಾಲಕ ಸಾವು!
ಮೃತ ಮಗುವನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ನಿಂಬಾಜಿನಗರದ ರಿದ್ಧಿ ಸಿದ್ಧಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು: ಆಕಸ್ಮಿಕವಾಗಿ ಲಿಫ್ಟ್ ಗುಂಡಿಗೆ ಬಿದ್ದು ಎಲೆಕ್ಟ್ರಿಷಿಯನ್ ದಾರುಣ ಸಾವು..!
ಮಂಜುನಾಥ್ ಅವರು ಕಟ್ಟಡದ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಮತೋಲನ ತಪ್ಪಿ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ. ಸುಮಾರು 35 ಅಡಿ ಎತ್ತರದಿಂದ ಅವರು ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ನಾಯಿ ಕೊಂದ ಮಹಿಳೆ; ಅಮಾನವೀಯ ಕೃತ್ಯ CCTVಯಲ್ಲಿ ಸೆರೆ
ಅಕ್ಟೋಬರ್ 31ರಂದು ಕೃತ್ಯ ನಡೆದಿದ್ದು, ಮನೆ ಕೆಲಸದಾಕೆ ನಡೆಸಿರುವ ಅಮಾನವೀಯ ಕೃತ್ಯ ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Video: ''ಕೈ ಮುಗಿತೀನಿ.. ಬೇಡ...''; ಪುಟ್ಟ ಬಾಲಕನ ಥಳಿಸಿ ಲಿಫ್ಟಿನಿಂದ ಹೊರದಬ್ಬಿದ ಮಹಿಳೆ..
ಟ್ಯೂಷನ್ ನಿಂದ ಹಿಂದಿರುಗಿದ ಎಂಟು ವರ್ಷದ ಬಾಲಕ ಲಿಫ್ಟ್ ನಲ್ಲಿ ತನ್ನ ಮನೆಗೆ ತೆರಳುತ್ತಿದ್ದ. ಈ ವೇಳೆ ಒಂದು ಮಹಡಿಯಲ್ಲಿ ಬಾಗಿಲು ತೆರೆದಿದ್ದು, ಈ ವೇಳೆ ಮಹಿಳೆಯೊಬ್ಬರು ಸಾಕು ನಾಯಿ ಸಹಿತ ಲಿಫ್ಟ್ ಗೆ ಪ್ರವೇಶ ಮಾಡುತ್ತಾರೆ.

ಗ್ರಹಚಾರ: ಡೋರ್ ಓಪನ್ ಆಯ್ತು, ಆದ್ರೆ ಲಿಫ್ಟ್ ಬರ್ಲಿಲ್ಲ; 4 ಮಹಡಿ ಕೆಳಗೆ ಬಿದ್ದು ವ್ಯಕ್ತಿ ಸಾವು!
4ನೇ ಮಹಡಿಯಿಂದ ಕೆಳಗಿಳಿಯಲು ಹೋದ ವ್ಯಕ್ತಿ ಲಿಫ್ಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಂಚಿಯ ಶೈಲೇಶ್ ಕುಮಾರ್ ಮೃತ ವ್ಯಕ್ತಿ.

ಬೆಂಗಳೂರು: ಲಿಫ್ಟ್ ಕೇಳಿ ಹಣ, ಚಿನ್ನಾಭರಣ ಕಳೆದು ಕೊಂಡ ಸ್ನೇಹಿತರು; ಮೂವರ ಬಂಧನ
ಸಂತ್ರಸ್ತರು ಅಡುಗೆ ಗುತ್ತಿಗೆಗಾಗಿ ನಗರಕ್ಕೆ ಬಂದಿದ್ದರು. ಚಿತ್ರದುರ್ಗದ ಭರಮಸಾಗರದಿಂದ ನಾಗ್ಯಾನಾಯ್ಕ ಹಾಗೂ ಮಂಜು ನಾಯ್ಕ ನಗರಕ್ಕೆ ಬಂದಿದ್ದರು. ಶನಿವಾರ ಬೆಳಗಿನ ಜಾವ 3.15ರ ಸುಮಾರಿಗೆ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು 3.30ರ ಸುಮಾರಿಗೆ ಕಾರು ಹತ್ತಿದ್ದಾರೆ.

ಲಿಫ್ಟ್ ನಲ್ಲಿ ಸಿಲುಕಿಕೊಂಡ ಸತೀಶ್ ಜಾರಕಿಹೊಳಿ ಪುತ್ರ: ಕೆಲಕಾಲ ಆತಂಕ ಸೃಷ್ಟಿ
ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಜಿಲ್ಲಾಸ್ಪತ್ರೆಯ ಲಿಫ್ಟ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು, ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಸೋಮವಾರ ನಡೆಯಿತು.

ಬೆಂಗಳೂರು: ಲಿಫ್ಟ್ ಕೊಡುವ ನೆಪದಲ್ಲಿ ಕರೆದೊಯ್ದು ಮಹಿಳೆಗೆ ಲೈಂಗಿಕ ಕಿರುಕುಳ!
ನಗರದಲ್ಲಿ ನೆಲೆಸಿರುವ ಕೇರಳ ಮೂಲದ 25 ವರ್ಷದ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯಿಂದ ಲಿಫ್ಟ್ ತೆಗೆದುಕೊಂಡು, ಭಾರಿ ಬೆಲೆ ತೆತ್ತ ಘಟನೆಯೊಂದು ಮಡಿವಾಳ ಪೊಲೀಸ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

