ಪುಣೆ: ಇದ್ದಕ್ಕಿದ್ದಂತೆ ಸ್ಥಗಿತ; ಒಂದೂವರೆ ಗಂಟೆ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ 7 ವರ್ಷದ ಬಾಲಕ ಸಾವು!
ಮೃತ ಮಗುವನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ನಿಂಬಾಜಿನಗರದ ರಿದ್ಧಿ ಸಿದ್ಧಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

ಪುಣೆ: ಪುಣೆಯ ಸಿಂಹಗಡ್ ರಸ್ತೆ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಲಿಫ್ಟ್ ಒಳಗೆ ಸಿಲುಕಿ ಏಳು ವರ್ಷದ ಬಾಲಕ ಸಾವಿಗೀಡಾದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಗುವನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ನಿಂಬಾಜಿನಗರದ ರಿದ್ಧಿ ಸಿದ್ಧಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಶಿವಾಂಶ್ ಎಂದಿನಂತೆ ರಾತ್ರಿ 10 ಗಂಟೆ ಸುಮಾರಿಗೆ ಹೌಸಿಂಗ್ ಸೊಸೈಟಿ ಆವರಣದೊಳಗೆ ಆಟವಾಡುತ್ತಿದ್ದ. ಈ ಸಮಯದಲ್ಲಿ, ಆತ ಕಟ್ಟಡದ ಲಿಫ್ಟ್‌ಗೆ ಪ್ರವೇಶಿಸಿ ಒಂದು ಗುಂಡಿಯನ್ನು ಒತ್ತಿದ್ದಾನೆ ಎಂದು ವರದಿಯಾಗಿದೆ.
ಲಿಫ್ಟ್ ಚಲಿಸಲು ಪ್ರಾರಂಭಿಸಿತು. ಆದರೆ, ಎರಡನೇ ಮಹಡಿ ತಲುಪುವ ಮುನ್ನವೇ ಮಧ್ಯದಲ್ಲಿಯೇ ನಿಂತಿತು. ಇದರಿಂದಾಗಿ ಮಗು ಒಳಗೆ ಸಿಲುಕಿಕೊಂಡಿತು. ಶಿವಾಂಶ್ ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬ ಸದಸ್ಯರು ಮತ್ತು ಇತರ ನಿವಾಸಿಗಳು ಅವನನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಕಾಟ ಮುಂದುವರೆದಂತೆ, ಲಿಫ್ಟ್ ಸಿಕ್ಕಿಹಾಕಿಕೊಂಡಿರಬಹುದು ಎಂದು ನಿವಾಸಿಗಳು ಶಂಕಿಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಪ್ರಯತ್ನದ ನಂತರ ಲಿಫ್ಟ್ ತೆರೆದಿದ್ದಾರೆ. ಆದರೆ, ಮಗು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಕಂಡುಬಂದಿದೆ. ದೀರ್ಘಕಾಲದವರೆಗೆ ಬಾಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.
ಲಿಫ್ಟ್‌ನಲ್ಲಿ ತಕ್ಷಣಕ್ಕೆ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಪೊಲೀಸರ ಪ್ರಾಥಮಿಕ ಸಂಶೋಧನೆಗಳು ಸೂಚಿಸಿವೆ. ಲಿಫ್ಟ್ ನಿರ್ವಹಣಾ ಜವಾಬ್ದಾರಿ ಹೌಸಿಂಗ್ ಸೊಸೈಟಿ ಆಡಳಿತ ಮಂಡಳಿಯ ಮೇಲಿದೆ.
ಸಿಂಹಗಡ್ ರಸ್ತೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



