ಬೆಂಗಳೂರು: ಹೋಟೆಲ್ ಸರ್ವಿಸ್ ಲಿಫ್ಟ್‌ನಲ್ಲಿ ಸಿಲುಕಿ ಯುವಕನ ದಾರುಣ ಸಾವು..!
ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್‌ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್‌ನ ಬಾಗಿಲು ಏಕಾಏಕಿ ತೆರೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಜಯನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ವಾಣಿಜ್ಯ ಸಂಸ್ಥೆಯೊಂದರ ಹಳೆಯ ಮಾದರಿಯ ಸರ್ವಿಸ್ ಲಿಫ್ಟ್‌ನಲ್ಲಿ ತಲೆ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಮೃತನನ್ನು ಧಾರವಾಡ ಮೂಲದ ರಾಜೇಶ್ (22) ಎಂದು ಗುರುತಿಸಲಾಗಿದೆ. ಸ್ವಂತ ಹೋಟೆಲ್ ಆರಂಭಿಸುವ ಉದ್ದೇಶ ಹೊಂದಿದ್ದ ಮೃತ ರಾಜೇಶ್, ಹೋಟೆಲ್ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ತನ್ನ ಸ್ನೇಹಿತನಿಗೆ ಸೇರಿದ ಜಯನಗರದ 27ನೇ ಕ್ರಾಸ್, 4ನೇ ಟಿ ಬ್ಲಾಕ್‌ನಲ್ಲಿರುವ ದಕ್ಷಿಣ ಉಪಹಾರ್ ಹೋಟೆಲ್‌ಗೆ ತೆರಳಿದ್ದರು. ಹೋಟೆಲ್‌ನ ದೈನಂದಿನ ಕಾರ್ಯವೈಖರಿಯನ್ನು ಗಮನಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 8.30ರ ವೇಳೆಗೆ, ನೆಲ ಮಹಡಿಯಿಂದ ಮೊದಲ ಮಹಡಿಗೆ ಆಹಾರ ಪದಾರ್ಥಗಳನ್ನು ಹೋಟೆಲ್‌ನ ಸರಕು ಸಾಗಣೆ (ಸರ್ವಿಸ್) ಲಿಫ್ಟ್ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ವೇಳೆ ಲಿಫ್ಟ್‌ನ ಬಾಗಿಲು ಏಕಾಏಕಿ ತೆರೆದಿದೆ.
ರಾಜೇಶ್ ಲಿಫ್ಟ್‌ನಿಂದ ಹೊರಬರಲು ಮುಂದಾದಾಗ, ಲಿಫ್ಟ್ ಏಕಾಏಕಿ ಚಲಿಸಲು ಆರಂಭಿಸಿದೆ. ಇದರಿಂದ ಅವರ ತಲೆ ಲಿಫ್ಟ್‌ನ ಮೇಲ್ಭಾಗದ ಅಂಚಿಗೆ (ಲಿಂಟೆಲ್) ಸಿಲುಕಿ ತೀವ್ರವಾಗಿ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹೋಟೆಲ್ ಹಾಗೂ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಜಯನಗರ ಪೊಲೀಸರು ಮುಂದುವರಿಸಿದ್ದಾರೆ.

ಶಾಲೆಯಲ್ಲೇ ಕುಸಿದು ಬಿದ್ದು 12 ವರ್ಷದ ವಿದ್ಯಾರ್ಥಿ ಸಾವು: 45 ನಿಮಿಷ ಚಿಕಿತ್ಸೆ ವಿಳಂಬ ಆರೋಪ, CCTV ವಿಡಿಯೊ ವೈರಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


