ನೋವಿನ ಕಣ್ಣೀರು: ಪತಿಯ ಸಾವಿನ ನೋವಿನಲ್ಲೂ ಗಂಡನ ಅಂಗಾಗಗಳನ್ನು ದಾನ ಮಾಡಿದ 8 ತಿಂಗಳ ಗರ್ಭಿಣಿ!
ಮಗು ಜನನದ ನಿರೀಕ್ಷೆಯಲ್ಲಿದ್ದ 8 ತಿಂಗಳ ಗರ್ಭಿಣಿಗೆ ಪತಿಯ ದುರ್ಮರಣ ಸುದ್ದಿ ಬರ ಸಿಡಿಲಂತೆ ಬಂದೊರಗಿತ್ತು. ಪತಿಯ ಸಾವಿನಲ್ಲಿಯೂ ಗೃಹಿಣಿ ಆತನ ಅಂಗಾಗಗಳನ್ನು ದಾನ ಮಾಡಿ ಸಾರ್ಥಕತೆ...

Published On :
ಬೆಂಗಳೂರು: ಮಗು ಜನನದ ನಿರೀಕ್ಷೆಯಲ್ಲಿದ್ದ 8 ತಿಂಗಳ ಗರ್ಭಿಣಿಗೆ ಪತಿಯ ದುರ್ಮರಣ ಸುದ್ದಿ ಬರ ಸಿಡಿಲಂತೆ ಬಂದೊರಗಿತ್ತು. ಪತಿಯ ಸಾವಿನಲ್ಲಿಯೂ ಗೃಹಿಣಿ ಆತನ ಅಂಗಾಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗರ್ಭೀಣಿಯ ಪತಿಗೆ ಸ್ಪರ್ಶ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪತಿ ಬದುಕಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಗರ್ಭೀಣಿ ಮಹಿಳೆ ದಿನ ದೂಡುತ್ತಿದ್ದರು. ಆದರೆ ಶನಿವಾರ ನಿರೀಕ್ಷೆ ಹುಸಿಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪತಿ ಮೃತಪಟ್ಟಿದ್ದರು.
ಪತಿಯ ಸಾವಿನ ಸುದ್ದಿ ಕೇಳಿದ್ದ ಪತ್ನಿಗೆ ಶಾಕ್ ಆಗಿತ್ತು. ಪತಿಯ ನೋವಿನಿಂದ ಎದೆಗುಂದದೆ ಗೃಹಿಣಿ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅವರ ನಿರ್ಧಾರದಿಂದಾಗಿ ಇಂದು ನಾಲ್ಕೈದು ಜನರಿಗೆ ಮರು ಜೀವ ಸಿಕ್ಕಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


