ರಾಜ್ಯ

ಬೆಂಗಳೂರು: ನಿತ್ಯ ಜನತಾ ದರ್ಶನ ನಡೆಸಲಿದ್ದಾರೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಜನರ ಸಮಸ್ಯೆಗಳನ್ನು ಖುದ್ದು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ಜನತಾ ದರ್ಶನವನ್ನು ಬೆಂಗಳೂರಿನಲ್ಲಿದ್ದ ಪ್ರತೀ ನಿತ್ಯ ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ಧರಿಸಿದ್ದಾರೆ...

ಬೆಂಗಳೂರು: ನಿತ್ಯ ಜನತಾ ದರ್ಶನ ನಡೆಸಲಿದ್ದಾರೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ ಕುಮಾರಸ್ವಾಮಿ
Published On :
ಬೆಂಗಳೂರು; ಜನರ ಸಮಸ್ಯೆಗಳನ್ನು ಖುದ್ದು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ಜನತಾ ದರ್ಶನವನ್ನು ಬೆಂಗಳೂರಿನಲ್ಲಿದ್ದ ಪ್ರತೀ ನಿತ್ಯ ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ಧರಿಸಿದ್ದಾರೆ. 
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನವನ್ನು ಪುನರ್ ಆರಂಭ ಮಾಡಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 
ಬೆಂಗಳೂರು ನಗರದಲ್ಲಿ ಇದ್ದ ದಿನದಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಕುಮಾರಸ್ವಾಮಿಯವರು ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಮೂಲಕ ನಾಡಿನ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡಲಿದ್ದಾರೆ. ಶೀಘ್ರ ಈ ಜನತಾದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. 

ವಾಸ್ತವ್ಯವನ್ನು ಕೃಷ್ಣಾದ ಅಕ್ಕಪಕ್ಕದಲ್ಲಿರುವ ಅನುಗ್ರಹ ಅಥವಾ ಕಾವೇರಿಯಲ್ಲಿ ಮಾಡುವ ಬದಲು ಜೆ.ಪಿ.ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿಯೇ ಮುಂದುವರೆಸಲು ಕುಮಾರಸ್ವಾಮಿಯವರು ತೀರ್ಮಾನಿಸಿದ್ದಾರೆ. 

ಜನತಾದರ್ಶನ ಸೇರಿದಂತೆ ಇನ್ನಿತರೆ ಅಧಿಕಾರಿಗಳ ಸಭೆ, ಮತ್ತಿತಕರ ಕಾರ್ಯಗಳ ನಿರ್ವಹಣೆಗಳಿಗಾಗಿ ಮಾತ್ರ ಕುಮಾರಸ್ವಾಮಿಯವರು ಕೃಷಅಣಾಗೆ ಆಗಮಿಸುತ್ತಾರೆಂದು ಹೇಳಲಾಗುತ್ತಿದೆ. 

ಜೆಪಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಜನತಾದರ್ಶನ ನಡೆಸಿದರೆ, ಜನಸಂದಣಿ ಹೆಚ್ಚಾಗಿ ನೆರೆಹೊರೆಯವರಿಗೆ ಸಮಸ್ಯೆಯಾಗುವ ಸಂಭವವಿದ್ದು, ಈ ಹಿನ್ನಲೆಯಲ್ಲಿ ಕೃಷ್ಣಾದಲ್ಲಿಯೇ ಜನತಾದರ್ಶನ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.