ರಾಜ್ಯ

ಕೊನೇ ಕ್ಷಣದ ಕಸರತ್ತು; ಮತದಾರರ ಪಟ್ಟಿ ಸೇರಲು 17,543 ಮಂದಿ ವಿಫಲ!

ರಾಜ್ಯದ ಪ್ರತೀಯೊಬ್ಬ ನಾಗರೀಕ ಕೂಡ ಮತದಾನದಿಂದ ವಂಚಿತನಾಗಬಾರದು ಎಂಬ ಚುನಾವಣಾ ಆಯೋಗದ ಆಶಯದ ಹೊರತಾಗಿಯೂ ಈ ಬಾರಿ ಸುಮಾರು 17, 543 ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ.

ಕೊನೇ ಕ್ಷಣದ ಕಸರತ್ತು; ಮತದಾರರ ಪಟ್ಟಿ ಸೇರಲು 17,543 ಮಂದಿ ವಿಫಲ!
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಜ್ಯದ ಪ್ರತೀಯೊಬ್ಬ ನಾಗರೀಕ ಕೂಡ ಮತದಾನದಿಂದ ವಂಚಿತನಾಗಬಾರದು ಎಂಬ ಚುನಾವಣಾ ಆಯೋಗದ ಆಶಯದ ಹೊರತಾಗಿಯೂ ಈ ಬಾರಿ ಸುಮಾರು 17, 543 ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ.
ಕಳೆದ ತಿಂಗಳಷ್ಟೇ ಚುನಾವಣಾ ಆಯೋಗ ಮಿಂಚಿನ ನೋಂದಣಿ ಎಂಬ ಮತದಾರ ನೋಂದಣಿ ಅಭಿಯಾನವನ್ನು ಆರಂಭಿಸಿತ್ತು. ಆಯೋಗದ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ ಮತ್ತು ಯಶಸ್ಸು ದೊರೆತಿತ್ತಾದರೂ, ಅಂತಿಮ ಕ್ಷಣದಲ್ಲಿ ಬಂದ ಲಕ್ಷಾಂತರ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾದ ಕಾರಣ ಸುಮಾರು  17,543 ಮಂದಿ ಮತದಾರರ ಪಟ್ಟಿ ಸೇರುವಲ್ಲಿ ವಿಫಲರಾಗಿದ್ದಾರೆ.
ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮತ್ತು ಆಯೋಗ ನಿಗದಿ ಪಡಿಸಿದ್ದ ಅಂತಿಮ ಕ್ಷಣಗಳಲ್ಲಿ ನಿರೀಕ್ಷೆಗೂ ಮಿರಿ ಆಗಮಿಸಿದ ಲಕ್ಷಾಂತರ ಅರ್ಜಿಗಳ ವಿಲೇವಾರಿ ಅಸಾಧ್ಯವಾದ್ದರಿಂದ 17,543 ಅರ್ಜಿಗಳು ವಿಲೇವಾರಿಯಾಗದೇ ಹಾಗೆಯೇ ಉಳಿದಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಏಪ್ರಿಲ್ 8ರಂದು ಆಯೋಜಿಸಲಾಗಿದ್ದ ಮಿಂಚಿನ ನೋಂದಣಿಗೆ ಲಕ್ಷಾಂತರ ಮಂದಿ ಅರ್ಜಿದಾರರು ಅರ್ಜಿ ಸಲ್ಲಿಕೆ ಮಾಡಿದ್ದರಾದರೂ, ಅವುಗಳ ಸಂಪೂರ್ಣ ವಿಲೇವಾರಿ ಅಸಾಧ್ಯವಾದ್ದರಿಂದ 17,543 ಅರ್ಜಿಗಳು ಬಾಕಿ ಉಳಿದುಕೊಂಡಿವೆ.
ಈ ಬಾರಿ ಆಯೋಗ ಸುಮಾರು  18.26 ಲಕ್ಷ ಅರ್ಜಿಗಳ ವಿಲೇವಾರಿ ಮಾಡಿದ್ದು, ಈ ಪೈಕಿ 13.30 ಹೊಸ ಮತದಾರರ ಅರ್ಜಿಗಳಾಗಿವೆ. ಇನ್ನು 2.27 ಲಕ್ಷವ ಅರ್ಜಿಗಳು ಬದಲಾವಣೆ ಕುರಿತು ಅರ್ಜಿಗಳಾಗಿದ್ದವು ಎಂದು ಆಯೋಗ ಮಾಹಿತಿ ನೀಡಿದೆ. ಎಲ್ಲ ಅರ್ಜಿಗಳನ್ನು ಬಹುತೇಕ ವಿಲೇವಾರಿ ಮಾಡಲಾಗಿದೆಯಾದರೂ ಅಂತಿಮ ಗಡುವಿನ ಹೊತ್ತಿಗೆ 17,543 ಅರ್ಜಿಗಳು ಬಾಕಿ ಉಳಿದುಕೊಂಡಿವೆ. 
ಈ ಬಗ್ಗೆ ಮಾಹಿತಿ ನೀಡಿರುವ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಕೆಎನ್ ರಮೇಶ್ ಅವರು, ಮಿಂಚಿನ ನೋಂದಣಿ ಕಾರ್ಯಕ್ರಮದ ಅಡಿಯಲ್ಲಿ 6,45,555 ಮತದಾರರ ನೋಂದಣಿ ಮಾಡಲಾಗಿದ್ದು, ಅಂತೆಯೇ ದೋಷಪೂರಿತ 72,000  ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಂತೆಯೇ 13 ಲಕ್ಷ ಹೊಸ ಅರ್ಜಿಗಳೊಂದಿಗೆ ಒಟ್ಟು 18.26 ಲಕ್ಷ ಅರ್ಜಿಗಳನ್ನು ಆಯೋಗ ವಿಲೇವಾರಿ ಮಾಡಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲೇ ಅತ್ಯಧಿಕ ನೋಂದಣಿ
ಇನ್ನು ಆಯೋಗ ಕೈಗೊಂಡಿದ್ದ ಮಿಂಚಿನ ನೋಂದಣಿ ಕಾರ್ಯಕ್ರಮಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಅಭೂತ ಪೂರ್ವ ಬೆಂಬಲ ದೊರೆತಿತ್ತು, ಪರಿಣಾಮ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 6, 45, 555 ಮತದಾರರು ಮತದಾರರ ಪಟ್ಟಿ ಸೇರಿದ್ದಾರೆ. ಈ ಪೈಕಿ ಮಿಂಚಿನ ನೋಂದಣಿ ಕಾರ್ಯಕ್ರಮವೊಂದರಲ್ಲೇ ಸುಮಾರು 1, 30, 466 ಮಂದಿ ನೋಂದಣಿಯಾಗಿದ್ದಾರೆ. ಉಳಿದಂತೆ ಬಳ್ಳಾರಿಯಲ್ಲಿ 44, 272, ಬೆಳಗಾವಿಯಲ್ಲಿ 38, 191, ಮೈಸೂರು 37, 378, ಕಲಬರುಗಿ 29, 309 ಮತ್ತು ರಾಯಚೂರಿನಲ್ಲಿ 27, 837 ಮಂದಿಯ ಅರ್ಜಿಗಳು ನೋಂದಣಿಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.