ಗಡುವಿಗೂ ಮುನ್ನ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಶಿರಾಡಿ ಘಾಟ್ ಹೆದ್ದಾರಿ?
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆಯ ಕಾಮಾಗಾರಿ ಕಾರ್ಯಗಳು ಭರದಿಂದ ಸಾಗಿದ್ದು, ಗಡುವಿಗೂ ಮುನ್ನ ಸಂಚಾರಕ್ಕೆ ಮುಕ್ತಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

Published On :
ಬೆಂಗಳೂರು; ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆಯ ಕಾಮಾಗಾರಿ ಕಾರ್ಯಗಳು ಭರದಿಂದ ಸಾಗಿದ್ದು, ಗಡುವಿಗೂ ಮುನ್ನ ಸಂಚಾರಕ್ಕೆ ಮುಕ್ತಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ.1 ರವರೆಗೆ ಕಾಲಾವಕಾಶವನ್ನು ನೀಡಿತ್ತು. ಆದರೆ, ಕಾಂಕ್ರೀಟೀಕರಣ ಕಾಮಗಾರಿ ತ್ವರಿತವಾಗಿ ಸಾಗಿದ್ದು, ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.
2ನೇ ಹಂತವಾಗಿ ರೂ.74 ಕೋಟಿ ಅಂದಾಜು ವೆಚ್ಚದಲ್ಲಿ 250.62ರಿಂದ 263 ಕಿ.ಮೀರವರೆಗೆ 12.38 ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ವೇಗ ಹೆಚ್ಚು ಮಾಡಲಾಗಿದೆ. ಕಾಮಗಾರಿಗಾಗಿ ಜ.20ರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಗಳನ್ನು ನಿಷೇಧಿಸಲಾಗಿತ್ತು. ಎಡಭಾಗದಲ್ಲಿ ಗ್ರ್ಯಾನ್ಯುಲರ್ ಸಬ್ ಬೇಸ್ ಮತ್ತು ಬಲಭಾಗದಲ್ಲಿ ಲೇಯಿಂಗ್ ಆಫ್ ಡ್ರೈಲೀನ್ ಕಾಂಕ್ರೀಟ್ (ಡಿಎಲ್'ಸಿ) ಕಾಮಗಾರಿ ಕಾರ್ಯಗಳು ನಡೆಯುತ್ತಿವೆ. 700 ಮೀಟರ್ ಮೇವ್ಮೆಂಟ್ ಕ್ವಾಲಿಟಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಗುತ್ತಿಗೆದಾರರು ಜರ್ಮನಿಯಿಂದ ಅತ್ಯಾಧುನಿಕ ಯಂತ್ರವನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಕ್ರೀಟ್ ರಸ್ತೆಗೆ ಮಣ್ಣಿನ ಕಣಗಳು ತಾಕದಂತೆ ತಡೆಯುವ ಸಲುವಾಗಿ ಮಣ್ಣಿನ ಮೇಲೆ ಜಿಯೋ ಟೆಕ್ಸ್'ಟೈಲ್ ಹಾಕಲಾಗಿದ್ದು, ನೀರಿನ ಸೋರುವಿಕೆ ತಡೆಯುವ ಸಲುವಾಗಿ ಪ್ರತೀ 25 ಮೀಟರ್ ಅಂತರದಲ್ಲಿ ಕ್ರಾಸ್ ಫಿಲ್ಟರ್ ಡ್ರೈನೇಜ್ ಮಾಡಲಾಗುತ್ತಿದೆ. ಒಟ್ಟು 600 ಎಂಎಂ ದಪ್ಪದ ರಸ್ತೆ ನಿರ್ಮಾಣವಾಗುತ್ತಿದ್ದು, 74 ಮೋರಿಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕShiradi Ghatಶಿರಾಡಿ ಘಾಟ್Bengaluru-Mangaluru NH 75ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


