ಬೆಂಗಳೂರು: ನೆರೆಮನೆಯ ಬಾತ್ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ವ್ಯಕ್ತಿ ಬಂಧನ
ಪಕ್ಕದ ಮನೆಯ ಮಹಿಳೆಯ ಸ್ನಾನದ ದೃಶ್ಯ ಸೆರೆ ಹಿಡಿಯುವುದಕ್ಕಾಗಿ, ಅವರ ಮನೆಯ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಆರೋಪದಡಿ ಜೀವನ್ ಸೇಠ್...

Published On :
ಬೆಂಗಳೂರು: ಪಕ್ಕದ ಮನೆಯ ಮಹಿಳೆಯ ಸ್ನಾನದ ದೃಶ್ಯ ಸೆರೆ ಹಿಡಿಯುವುದಕ್ಕಾಗಿ, ಅವರ ಮನೆಯ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಆರೋಪದಡಿ ಜೀವನ್ ಸೇಠ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಭೌಮನಗರದಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಜೀವನ್ ಮನೆಯ ಪಕ್ಕವೇ ಕುಟುಂಬವೊಂದು ವಾಸವಿದೆ. ಅವರ ಮನೆಯಲ್ಲೇ ಕ್ಯಾಮೆರಾ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದರು.
ಇತ್ತೀಚೆಗೆ ಸ್ನಾನ ಮಾಡುತ್ತಿದ್ದ ಮಹಿಳೆಗೆ ಕಿಟಕಿಯಲ್ಲಿದ್ದ ಕ್ಯಾಮೆರಾ ಕಂಡಿತ್ತು. ನಂತರ ಆ ವಿಷಯವನ್ನು ತನ್ನ ಪತಿಗೆ ತಿಳಿಸಿ ಅದರ ಸಮೇತವಾಗಿ ದೂರು ನೀಡಿದ್ದರು. ಜೀವನ್ ಸೇರಿದಂತೆ ಅಕ್ಕ–ಪಕ್ಕದಲ್ಲಿ ವಾಸವಿರುವ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಅವಾಗಲೇ ಜೀವನ್ ತಪ್ಪೊಪ್ಪಿಕೊಂಡ’ ಎಂದರು.
ಮಹಿಳೆ ತರಕಾರಿ ತರಲು ಮನೆಯಿಂದ ಕೆಳಗೆ ಹೋಗಿದ್ದಾಗ ಕ್ಯಾಮೆರಾ ಫಿಕ್ಸ್ ಮಾಡಿದ್ದಾಗಿ ಆತ ಹೇಳಿದ್ದಾನೆ. ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇತ್ತೀಚೆಗಷ್ಟೆ ಕೋರಮಂಗಲದಿಂದ ಇಲ್ಲಿಗೆ ಶಿಫ್ಟ್ ಆಗಿದ್ದ, ಈ ಮೊದಲು ಆರೋಪಿ ಇಂತ ಕೆಲಸಗಳನ್ನು ಮಾಡಿದ್ದ, ಆದರೆ ಎಲ್ಲಿಯೂ ದೂರು ದಾಖಲಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


