ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ತಾಯಿ ಭೇಟಿ ವೇಳೆ ಭಾವುಕನಾದ ಆರೋಪಿ ಗಣೇಶ್ ಮಿಸ್ಕಿನ್

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಗಾದ ಆರೋಪಿ ಗಣೇಶ್ ಮಿಸ್ಕಿನ್'ಗೆ ತಾಯಿಯನ್ನು ಭೇಟಿಯಾಗುವ ಅವಕಾಶವನ್ನು ಮಾಡಿಕೊಡಲಾಗಿದ್ದು, ತಾಯಿ ಭೇಟಿ ವೇಳೆ ಆರೋಪಿ ಭಾವುಕನಾಗಿದ್ದ ಎಂದು ತಿಳಿದುಬಂದಿದೆ...

ಗೌರಿ ಲಂಕೇಶ್ ಹತ್ಯೆ ಪ್ರಕರಣ: ತಾಯಿ ಭೇಟಿ ವೇಳೆ ಭಾವುಕನಾದ ಆರೋಪಿ ಗಣೇಶ್ ಮಿಸ್ಕಿನ್
ಗೌರಿ ಲಂಕೇಶ್
Published On :
ಹುಬ್ಬಳ್ಳಿ: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಗಾದ ಆರೋಪಿ ಗಣೇಶ್ ಮಿಸ್ಕಿನ್'ಗೆ ತಾಯಿಯನ್ನು ಭೇಟಿಯಾಗುವ ಅವಕಾಶವನ್ನು ಮಾಡಿಕೊಡಲಾಗಿದ್ದು, ತಾಯಿ ಭೇಟಿ ವೇಳೆ ಆರೋಪಿ ಭಾವುಕನಾಗಿದ್ದ ಎಂದು ತಿಳಿದುಬಂದಿದೆ. 
ಗೌರಿ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಗಣೇಶ್ ಮಿಸ್ಕಿನ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದರು. ಶೋಧನೆಗಾಗಿ ಶನಿವಾರ ಮತ್ತು ಭಾನುವಾರವಷ್ಟೇ ಗಮೇಶ್ ಮಸ್ಕಿನ್ ಜೊತೆಗೆ ಆತನ ಮನೆಗೆ ತೆರಳಿದ ಅಧಿಕಾರಿಗಳು ತಾಯಿಯೊಂದಿಗೆ ಆರೋಪಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ ಆರೋಪಿ ಭಾವುಕನಾಗಿದ್ದ ಎಂದು ಹೇಳಲಾಗುತ್ತಿದೆ. 
ಗಣೇಶ್ ಮಿಸ್ಕಿ ಅಲ್ಲದೆ, ಮತ್ತೊಬ್ಬ ಬಂಧಿತ ಆರೋಪಿ ಅಮಿತ್ ಬಡ್ಡಿ ಮನೆಗೂ ಅಧಿಕಾರಿಗಳು ಶನಿವಾರ ಭೇಟಿ ನೀಡಿದ್ದು, ಆರೋಪಿಯ ಆಧಾರ್ ಮತ್ತು ವೋಟರ್ ಐಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೆ ಚೈತನ್ಯ ನಗರದಲ್ಲಿರುವ ಮಿಸ್ಕಿನ್ ಮನೆಗೂ ಭೇಟಿ ನೀಡಿರುವ ಅಧಿಕಾರಿಘಳು ಮಿಸ್ಕಿನ್ ಪೋಷಕರು ಹಾಗೂ ಆತನ ಕುಟುಂಬ ಸದಸ್ಯರ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಭೇಟಿ ಸಂದರ್ಭದಲ್ಲಿ ಮಿಸ್ಕಿನ್'ಗೆ ಸಂಬಂಧಿಸಿದ ಪ್ರಮಾಣಪತ್ರಗಳ ಪ್ರತಿಯನ್ನು ಪಡೆದುಕೊಂಡಿದ್ದಾರೆ. 
ಮನೆಗೆ ಬರುತ್ತಿದ್ದಂತೆಯೇ ಗಣೇಶ್ ಮಿಸ್ಕಿನ್ ತಾಯಿಯನ್ನು ಕಂಡು ಭಾವುಕನಾಗಿದ್ದಾನೆ. ತಾಯಿಯನ್ನು ಅಪ್ಪಿಕೊಂಡು ರೋಧಿಸಿದ್ದಾನೆ. ತಾಯಿ ಭೇಟಿ ವೇಳೆ ನಾನು ಯಾವುದೇ ತಪ್ಪು ಮಾಡಿಲ್ಲ. ನೀನು ಅಳಬೇಡ. ನನ್ನ ಬಗ್ಗೆ ಚಿಂತಿಸಬೇಡ ಎಂದು ಪದೇ ಪದೇ ತಾಯಿಯನ್ನು ಸಮಾಧಾನಪಡಿಸಲು ಯತ್ನಿಸಿದ್ದಾನೆಂದು ಮೂಲಗಳು ತಿಳಿಸಿವೆ. 
ಗಣೇಶ್ ಮಿಸ್ಕಿನ್ ಕುಟುಂಬವನ್ನು ಸಾಕಿ ಸಲಹುತ್ತಿದ್ದ. ಮನೆಯಲ್ಲಿ ಹಿರಿಯ ಮಗನಾಗಿದ್ದ ಗಣೇಶ್'ಗೆ ತಮ್ಮನಿದ್ದು ನಿರುದ್ಯೋಗಸ್ಥನಾಗಿತ್ತ. ಸಹೋದರ ಬಂಧನದ ಬಳಿಕ ಮಿಸ್ಕಿನ್ ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಇದೀಗ ಕೆಲಸ ಮಾಡಲು ಆರಂಭಿಸಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.