ಶಕ್ತಿಸೌಧ, ವಿಧಾನಸೌಧಕ್ಕೂ ತಟ್ಟಿದ್ದ 'ಗ್ರಹಣ': 'ಅಶುಭ' ದಿನ ಎದುರಿಸಲು ದೇಗುಲಗಳಿಗೆ ನಾಯಕರ ಭೇಟಿ
ಚಂದ್ರಗ್ರಹಣದ ಹಿನ್ನಲೆಯಲ್ಲಿ ಅನೇಕ ರಾಜಕೀಯ ನಾಯಕರುಗಳು ದೇವಸ್ಥಾನಗಳಿಗೆ ತೆರಳಿ ಶಾಂತಿ, ಹೋಮ, ಗ್ರಹಣದ ದೋಷಗಳ ಪರಿಹಾರ ಮಾಡಿಕೊಂಡರು...

Published On :
ಬೆಂಗಳೂರು: ಚಂದ್ರಗ್ರಹಣದ ಹಿನ್ನಲೆಯಲ್ಲಿ ಅನೇಕ ರಾಜಕೀಯ ನಾಯಕರುಗಳು ದೇವಸ್ಥಾನಗಳಿಗೆ ತೆರಳಿ ಶಾಂತಿ, ಹೋಮ, ಗ್ರಹಣದ ದೋಷಗಳ ಪರಿಹಾರ ಮಾಡಿಕೊಂಡರು.
ಚಂದ್ರಗ್ರಹಣ ಹಿನ್ನಲೆಯಲ್ಲಿ ಕೆಲ ಜ್ಯೋತಿಷಿಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಭವಿಷ್ಯ ನುಡಿದ ಹಿನ್ನಲೆಯಲ್ಲಿ, ಇದನ್ನು ನಂಬಿದ್ದ ಅನೇಕ ರಾಜಕೀಯ ನಾಯಕರು ದೇಗುಲಗಳಿಗೆ ಭೇಟಿ ನೀಡಿ ಪೂಜೆಗಳನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ಭೇಟಿ ನೀಡಿ ಬಾಲಾಜಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಡಿ.ಕೆ. ಶಿವಕುಮಾರ್, ಹೆಚ್.ಡಿ. ರೇವಣ್ಣ ಕೂಡ ದೇವಾಲಯಗದಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇನ್ನು ಜ್ಯೋತಿಷಿಗಳ ಸಲಹೆಯಂತೆಯೇ ಸಾರ್ವಜನಿಕರ ಕಣ್ಣನಿಂದ ದೂರವಿರಲು ನಿರ್ಧರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ಬೆಂಗಳೂರಿನ ಹೊರವಲಯದಲ್ಲಿ ಮೂರು ದಿನಗಳ ಕಾರ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಸಹೋದರ ಶಿವಪ್ರಸಾದ್ ಅವರ ಅಂತ್ಯಕ್ರಿಯೆ ತುಮಕೂರಿನಲ್ಲಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಹಲವು ರಾಜಕೀಯ ನಾಯಕರು ತುಮಕೂರಿಗೆ ಭೇಟಿ ನೀಡಿ, ಶಿವಪ್ರಸಾದ್ ಅವರು ಅಂತಿಮ ದರ್ಶನ ಪಡೆದುಕೊಂಡರು.
ಶಕ್ತಿಕೇಂದ್ರ, ವಿಧಾನಸೌಧ ಹಾಗೂ ವಿಕಾಸಸೌಧದಲ್ಲೂ ಎಂದಿನಿಂತೆ ಜನಜಂಗುಳಿ ಇರಲಿಲ್ಲ. ಬಹುತೇಕ ಶಾಸಕರು ಸಚಿವರ ಕೊಠಡಿಗಳು ಖಾಲಿಯಾಗಿದ್ದವು. ವಿಧಾನಸೌಧದ ಮೊಗಸಾಲೆ, ಕಾರಿಡಾರ್ ಗಳೂ ಖಾಲಿಯಾಗಿದ್ದವು. ವಿಧಾನಸೌಧದ ಪಾರ್ಕಿಂಗ್ ಸ್ಥಳದಲ್ಲೂ ವಾಹನಗಳ ಸುಳಿವಿರಲಿಲ್ಲ. ಸಚಿವರ ಸರ್ಕಾರಿ ನಿವಾಸಗಳತ್ತ ಜನರ ಸುಳಿವಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruKarnatakaಕರ್ನಾಟಕtempleದೇವಸ್ಥಾನPolitical LeadersLunar Eclipseಚಂದ್ರಗ್ರಹಣರಾಜಕೀಯ ನಾಯಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


