ರಾಜ್ಯ

ನಾನು ವಿಷಕಂಠನಿದ್ದಂತೆ, ವಿಷ ನುಂಗಿ ಅಮೃತ ನೀಡುವೆ; ಹೆಚ್.ಡಿ.ಕುಮಾರಸ್ವಾಮಿ

ನಾನು ವಿಷಕಂಠನಿದ್ದಂತೆ. ನೋವಿನ ವಿಷ ನುಂಗುತ್ತಿರುತ್ತಿವ ನಾನು ವಿಷಕಂಠನಾಗಿದ್ದು, ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ...

ನಾನು ವಿಷಕಂಠನಿದ್ದಂತೆ, ವಿಷ ನುಂಗಿ ಅಮೃತ ನೀಡುವೆ; ಹೆಚ್.ಡಿ.ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
Published On :
ಬೆಂಗಳೂರು: ನಾನು ವಿಷಕಂಠನಿದ್ದಂತೆ. ನೋವಿನ ವಿಷ ನುಂಗುತ್ತಿರುತ್ತಿವ ನಾನು ವಿಷಕಂಠನಾಗಿದ್ದು, ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ. 
ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಪಕ್ಷದ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. 
ರಾಜ್ಯ ಸಮ್ಮಿಶ್ರ ಸರ್ಕಾರ ಮುಖ್ಯಮಂತ್ರಿಯಾಗಿರುವುದಕ್ಕೆ ಕಾರ್ಯಕರ್ತರಿಗೆ ಸಂತೋಷವಾಗಿದೆ. ಆದರೆ, ನಾನು ಸಂತೋಷದಲ್ಲಿಲ್ಲ. ನೋವಿನ ವಿಷ ನುಂಗುತ್ತಿರುವ ನಾನು ವಿಷಕಂಠನಾಗಿದ್ದು, ನಿಮಗೆ ಅಮೃತ ನೀಡುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆಂದು ಹೇಳಿದ್ದಾರೆ. 
ಮೆರೆಯುವ ಸಲುವಾಗಿ ನಾನು ರಾಜ್ಯದ ಮುಖ್ಯಮಂತ್ರಿಯಾಗಿಲ್ಲ. ರಾಜ್ಯದ ಜನತೆಯ, ಬಡವರ, ರೈತರ ಸಮಸ್ಯೆಗಳನ್ನು ಪಕ್ಷ ಮತ್ತು ಜಾತಿ ಭೇದ ಮರೆತು ಬಗೆಹರಿಸಬೇಕೆಂಬ ಬಯಕೆಯಿಂದ ಬಹುಮತದೊಂದಿಗೆ ಮುಖ್ಯಮಂತ್ರಿಯಾಗಬೇಕೆಂದುಕೊಂಡಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಅಚ್ಚರಿಯೆಂಬಂತೆ ಮುಖ್ಯಮಂತ್ರಿಯಾಗಿದ್ದೇನೆ. ಯಾವುದೇ ಸ್ಥಳಕ್ಕೆ ನಾನು ಮಧ್ಯರಾತ್ರಿ ಹೋದರೂ ಜನ ಸೇರುತ್ತಾರೆ. ಆದರೆ, ಅದೇಕೋ ಮತ ನೀಡುವಾಗ ಮಾತ್ರ ನನ್ನ ಪಕ್ಷ ಮತ್ತು ನಮ್ಮ ಅಭ್ಯರ್ಥಿಗಳನ್ನು ಮರೆತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಯಾವುದೇ ಪಕ್ಷಕ್ಕೆ ಜನಾಶೀರ್ವಾದ ಸಿಗದ ಕಾರಣ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದೇನೆ. ಇದಕ್ಕೆ ಕಾರ್ಯಕರ್ತರಿಗೆ ಸಂತೋಷವಾಗಿದೆ. ಆದರೆ, ನಾನು ಸಂತೋಷವಾಗಿಲ್ಲ. ವಿಷ ಕಂಠನಾಗಿ ನೋವು ನುಂಗಿಕೊಂಡಿದ್ದೇನೆ. ರಾಜ್ಯದ ಜನತೆಗೆ ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಂದು ಭಾವುಕರಾದರು. 
ರಾಜ್ಯದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ದಿಟ್ಠ ನಿರ್ಧಾರ ಕೈಗೊಂಡಿದ್ದೇನೆ. ರೈತರ ಜೀವನದಲ್ಲಿ ಚೆಲ್ಲಾಟ ಆಡುವ ವ್ಯಕ್ತಿ ನಾನಲ್ಲ. ಸಹಕಾರ ಬ್ಯಾಂಕ್'ಗಳ ಸದಸ್ಯ ರೈತರ ಒಂದು ಲಕ್ಷ ರುವರೆಗಿನ ಸಾಲ ಮನ್ನಾ ಮಾಡುವ ಕಠಿಣ ನಿರ್ಧಾರ ಕೈಗೊಂಡಿದ್ದೇನೆ. ಇಷ್ಟಾದರೂ ಸಮಾಧಾನ ಇಲ್ಲವಾದರೆ, ರೈತರು ನನಗೆ ವಿಷ ಕೊಡುತ್ತಾರೋ? ಅನ್ನ ಕೊಡುತ್ತಾರೋ? ಎಂದು ಮಾರ್ಮಿಕವಾಗಿ ನುಡಿದರು. 
ಬಳಿಕ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಮೀನುಗಾರರನ್ನು ನನ್ನ ವಿರುದ್ಧ ಎತ್ತಿಕಟ್ಟಲು ಬಿಜೆಪಿ ಯತ್ನ ನಡೆಸುತ್ತಿದೆ. ಮೀನುಗಾರ ಮಹಿಳೆಯರು ನಾನು ಅವರ ಮುಖ್ಯಮಂತ್ರಿಯಲ್ಲ ಎಂದು ಹೇಳಿದಾಗ ಬಹಳ ನೋವಾಯಿತು. ನಮ್ಮ ಪಕ್ಷದ ಪರ ಮತ ಹಾಕಲಿಲ್ಲ ಎಂದು ನಾನು ಬೇಸರಗೊಂಡಿಲ್ಲ. ಶೀಘ್ರದಲ್ಲಿಯೇ ಮೀನುಗಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ತಿಳಿಸಿದ್ದಾರೆ. 
ಜೆಡಿಎಸ್ ಕಾರ್ಯಕರ್ತ ವಿರುದ್ಧ ಚಾರ್ಜ್ ಶೀಟ್'ಗಳನ್ನು ರದ್ದುಗೊಳಿಸಿ
ಬಳಿಕ ಮಾತನಾಡಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು, ವಿಧಾನಸಭಾ ಚುನಾವಣೆ ವೇಲೆ ಪಕ್ಷದ ಕಾರ್ಯಕರ್ತ ವಿರುದ್ಧ ದಾಖಲಾಗಿದ್ದ ಚಾರ್ಚ್ ಶೀಟ್ ಗಳನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ. 
ಪ್ರಕರಣಗಳ ವಿರುದ್ಧ ಹೋರಾಡುವಾಗ ಪಕ್ಷದ ಕಾರ್ಯಕರ್ತರು ತಾಳ್ಮೆಯಿಂದ ಇರಬೇಕು. 20-30 ಕಾರ್ಪೊರೇಷನ್ ಗಳಷ್ಟೇ ನಮ್ಮ ನಿಯಂತ್ರಣದಲ್ಲಿದ್ದು, ಪ್ರತೀಯೊಬ್ಬರನ್ನೂ ಮುಖ್ಯಸ್ಥರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.