ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಸಬ್ ರಿಜಿಸ್ಟಾರ್ ಕಿಡ್ನಾಪ್, ದೂರು ದಾಖಲು
ಸಬ್ ರಿಜಿಸ್ಟಾರ್ (ಉಪನೋಂದಣಾಧಿಕಾರಿ) ಅಧಿಕಾರಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Published On :
ಬೆಂಗಳೂರು: ಸಬ್ ರಿಜಿಸ್ಟಾರ್ (ಉಪನೋಂದಣಾಧಿಕಾರಿ) ಅಧಿಕಾರಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಾಂತಿನಗರ ಉಪನೊಂದಣಾಧಿಕಾರಿ ಕಛೇರಿಯ ಹಿರಿಯ ಅಧಿಕಾರಿ ರಂಗಸ್ವಾಮಿ ಅವರನ್ನು ದುಷ್ಕರ್ಮಿಗಳು ಅಪಹರಿಸಿ ರಾತ್ರಿಯೆಲ್ಲಾ ಸುತ್ತಾಡಿಸಿದ್ದು ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.
ಕೆ.ಎಚ್. ರಸ್ತೆಯ ಪಾದಚಾರಿ ಮಾರ್ಗದಿಂದ ಅಧಿಕಾರಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದು ಅಫರಣಕಾರರ ಗುಂಪಿನಲ್ಲಿ ಹತ್ತು ಜನರಿದ್ದರೆಂದು ಹೇಳಲಾಗಿದೆ.
ಅಧಿಕಾರಿ ರಂಗಸ್ವಾಮಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದರು ಆ ಕಾರಣಕ್ಕಾಗಿ ಅವರನ್ನು ಅಪಹರಣ ಮಾಡಲಾಗಿತ್ತು ಎಂದು ತಿಳಿದುಬಂದಿದ್ದು ಅಪಹರಣಕಾರರು ಅಧಿಕಾರಿಗೆ ಜನರಿಗೆ ಕಿರುಕುಳ ನೀಡಬಾರದೆಂದು ಎಚ್ಚರಿಕೆ ನಿಡಿದ್ದಾರೆ.
ಕಾರಿನಲ್ಲಿ ಅಪಹರಣ ಮಾಡಿದ್ದ ಗುಂಪು ಅಧಿಕಾರಿಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಲ್ಲದೆ ಕಾರಿನೊಳಗೆ ಜ್ಜೋರಾಗಿ ಮ್ಯೂಸಿಕ್ ಆಹಿಕಿ ಬೇರೆಯವರಿಗೆ ತಿಳಿಯದಂತೆ ಅಪಹರಣ ಮಾಡಲಾಗಿತ್ತು. ಜುಲೈ 5ರಂದು ಈ ಘಟನೆ ನಡೆದಿದ್ದು ಮರುದಿನ ಜುಲೈ 6ರಂದು ಅಧಿಕಾರಿಯು ವಿಲ್ಸನ್ ಗಾರ್ಡನ್ ಪೋಲೀಸರಿಗೆ ದೂರು ನೀಡಿದ್ದಾರೆ.
ಅಪಹರಣ ಕಾರರ ಸುಳಿವು ಮಾತ್ರ ಇನ್ನೂ ಪತ್ತೆಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


