ಸಿದ್ದು ಕನಸಿನ ಕೂಸು ಇಂದಿರಾ ಕ್ಯಾಂಟೀನ್: 72 ಕ್ಯಾಂಟೀನ್ ಗಳು ಮಾತ್ರ ಈಗ ಚಾಲನೆಯಲ್ಲಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ್ ಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ, ಬೆಂಗಳೂರು ಸೇರಿದಂತೆ ...

Published On :
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ್ ಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ, ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಒಟ್ಟು 263 ಕ್ಯಾಂಟೀನ್ ತೆರೆಯಲು ಯೋಜಿಸಲಾಗಿತ್ತು.
ಎಲ್ಲಾ ಕ್ಯಾಂಟೀನ್ ಗಳು ಜೂನ್ ಅಂತ್ಯದ ವೇಳೆಗೆ ಕಾರ್ಯ ನಿರ್ವಹಿಸಬೇಕಿತ್ತು, ಆದರೆ ಕೇವಲ 72 ಕ್ಯಾಂಟಿನ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.ಚುನಾವಣೆಗೂ ಮುನ್ನ ನಗರ ಮತದಾರರನ್ನು ಸೆಳೆಯಲು ಸಿದ್ದರಾಮಯ್ಯ ಸಬ್ಸಿಡಿ ದರದಲ್ಲಿ ಆಹಾರ ನೀಡಲು ನಿರ್ಧರಿಸಿದ್ದರು,
2017ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಯಿತು. ನಗರದ ವಿವಿಧ ಭಾಗಗಳಲ್ಲಿ 180 ಕ್ಯಾಂಟೀನ್ ಗಳಿವೆ, ಅದರೆ ಅವುಗಳಲ್ಲಿ ಕೆಲವು ಕ್ಯಾಂಟೀನ್ ಸ್ಥಾಪಿಸಲು ಜಾಗ ಸಿಕ್ಕಿಲ್ಲ, ಇಂದಿರಾ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗಿದೆ, ಇಂದಿರಾ ಕ್ಯಾಂಟೀನ್ ನಲ್ಲಿ 5 ರೂಪಾಯಿಗೆ ಬೆಳಗ್ಗಿನ ಉಪಹಾರ ಮತ್ತು 10 ರೂಪಾಯಿಗೆ ಊಟ ನೀಡಲಾಗುತ್ತದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ಪ್ರಸಿದ್ಧವಾದ ನಂತರ, ಕರ್ನಾಟಕದಾದ್ಯಂತ ಆರಂಭಿಸಲು ತೀರ್ಮಾನಿಸಲಾಗಿತ್ತು.
1 ಲಕ್ಷ ಜನರಿಗೆ 1 ಕ್ಯಾಂಟಿನ್ ನಂತೆ ಒಟ್ಟು 300 ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಬೆಂಗಳೂರು ಹೊರತು ಪಡಿಸಿ 263 ಪ್ರದೇಶಗಳನ್ನು ಗುರುತಿಸಲಾಗಿತ್ತು.
2018ರ ಜೂನ್ ತಿಂಗಳ ಅಂತ್ಯಜ ವೇಳೆಗೆ 263 ಕ್ಯಾಂಟೀನ್ ಗಳನ್ನು ಆರಂಭಿಸಲು ನಿರ್ಧರಿಸಲಾಗಿತ್ತು, ಆದರೆ ಹಲವು ಕಾರಣಗಳಿಂದಾಗಿ ವಿಳಂಬವಾಗುತ್ತಿದೆ. ಅದಕ್ಕೆ ಭೂಮಿ ಕೊರತೆ ಕೂಡ ಕಾರಣ. ಜೊತೆಗೆ ವಿಧಾನವ ಸಭೆ ಚುನಾವಣೆ ಕೂಡ ಕಾರಣವಾಗಿದೆ.
263 ಕ್ಯಾಂಟೀನ್ ಗಳಲ್ಲಿ 136 ಸ್ಥಳಗಳಲ್ಲಿ ಕೆಲಸ ಪೂರ್ಣಗೊಂಡಿದೆ, ಆದರೆ ಹಲವು ಸ್ಥಳಗಳಲ್ಲಿ ಅಡುಗೆ ಮನೆ ಇನ್ನೂ ಸಿದ್ಧವಾಗಿಲ್ಲ, 136 ಕ್ಯಾಂಟೀನ್ ಗಳಲ್ಲಿ 72 ಮಾತ್ರ ಕಾರ್ಯಕ್ಕೆ ಸಿದ್ಧವಾಗಿವೆ.
ಇನ್ನೂ 37 ಕ್ಯಾಂಟೀನಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನೂ 9 ದಿನಗಳಲ್ಲಿ ಪೂರ್ಣಗೊಳ್ಳಲಿದೆ, ಇನ್ನೂ 90 ಸ್ಥಳಗಳಲ್ಲಿ ನಿರ್ಮಾಣ ಕಾರ್ಯ ಆರಂಭಗೊಳ್ಳಲೇ ಇಲ್ಲ, ನಗರಾಭಿವೃದ್ದಿ ಇಲಾಖೆಯಿಂದ 211.24 ಕೋಟಿ ರು ಹಣ ಬಿಡುಗೆಯಾಗಿದೆ.
ಕಳೆದ ಮೂರು. ತಿಂಗಳಿದ ಕೆಲಸ ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಈ ಸಂಬಂಧ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


