ಗೋ ಮಹತ್ವ ಸಾರಲು ಫೆ.2ರಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ಗೋ ರಕ್ಷಾ ಯಜ್ಞ!
ಗೋವಿನ ಮಹತ್ವ ಸಾರಲು ಫೆಬ್ರವರಿ 2ರಂದು ಬಿಜೆಪಿ ನಗರದಲ್ಲಿ 24 ಗಂಟೆಗಳ ಕಾಲ ಗೋ ರಕ್ಷಾ ಅಸ್ತಯಾಮಾ ಯಜ್ಞವನ್ನು ಕೈಗೊಳ್ಳಲಿದೆ...

Published On :
ಬೆಂಗಳೂರು: ಗೋವಿನ ಮಹತ್ವ ಸಾರಲು ಫೆಬ್ರವರಿ 2ರಂದು ಬಿಜೆಪಿ ನಗರದಲ್ಲಿ 24 ಗಂಟೆಗಳ ಕಾಲ ಗೋ ರಕ್ಷಾ ಯಜ್ಞವನ್ನು ಆಯೋಜಿಸಲಿದೆ.
ಗೋವಿನ ಬಹು-ಆಯಾಮದ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಭಾರತದಲ್ಲಿ ಜಾನುವಾರು ರಕ್ಷಿಸುವ ಉದ್ದೇಶದಿಂದ ಬಿಜೆಪಿ ಈ ಮಹಾಯಜ್ಞವನ್ನು ಆಯೋಜಿಸುತ್ತಿದೆ ಎಂದು ಗೋ ಸಂರಕ್ಷಣಾ ಕೇಂದ್ರದ ರಾಜ್ಯ ಸಂಚಾಲಕರಾದ ಸಿದ್ದಾರ್ಥ್ ಗೋಯೆಂಕಾ ಹೇಳಿದ್ದಾರೆ.
ಯಾಗದಲ್ಲಿ 24 ಗಂಟೆಗಳ ಕಾಲ ಅಖಂಡಾ ರಾಮಾಯಾಣವನ್ನು ಪಠಿಸಲಾಗುತ್ತದೆ. ಇನ್ನು ಸೀತಾ ದೇವತೆ ಹುಟ್ಟಿದ ಜನಕಪುರಿಯಿಂದ ವಿಶೇಷ ರಂಗಭೂಮಿ ತಂಡವು ನೃತ್ಯ ಪ್ರದರ್ಶನ ನೀಡಲಿದೆ ಎಂದರು.
ಫೆಬ್ರವರಿ 3ರಂದು ಗೋ ರಕ್ಷಾ ಯಾಗದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಇತರ ನಾಯಕರು ಭಾಗವಹಿಸಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


