ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್'ಗಳ ಕೊರತೆಯಿದೆ: ಬೆಂಗಳೂರು ಪೊಲೀಸರು
ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್'ಗಳ ಕೊರತೆಯಿದೆ ಎಂದು ಬೆಂಗಳೂರು ನಗರ ಪೊಲೀಸರು ಹೇಳಿದ್ದಾರೆ...

Published On :
ಬೆಂಗಳೂರು: ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್'ಗಳ ಕೊರತೆಯಿದೆ ಎಂದು ಬೆಂಗಳೂರು ನಗರ ಪೊಲೀಸರು ಹೇಳಿದ್ದಾರೆ.
ಡಿ.31ರ ಮಧ್ಯರಾತ್ರಿ ಹೊಸವರ್ಷದ ಸಂಭ್ರಮವನ್ನು ಆಚರಿಸಲೆಂದು ಹೊರಗೆ ಬಂದಿದ್ದ ಸಾಕಷ್ಟು ಜನರು, ಸಂಭ್ರಮದ ಬಳಿಕ ಸರಿಯಾದ ಸಮಯಕ್ಕೆ ಕ್ಯಾಬ್ ಹಾಗೂ ಆಟೋಗಳು ದೊರಕದೆ ಪರದಾಡುವಂತಾಗಿತ್ತು. ಗಂಟೆಗಟ್ಟಲೆ ಕಾದರೂ ಜನರಿಗೆ ಕ್ಯಾಬ್, ಆಟೋಗಳು ದೊರಕುತ್ತಿರಲಿಲ್ಲ.
ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಡಿಸಿಪಿ ಅಬ್ದುಲ್ ಅಹದ್ ಅವರು ಮಾತನಾಡಿ, ಹೊಸ ವರ್ಷಾಚರಣೆ ದಿನದಂದು ಸಾಕಷ್ಟು ಜನರು ಕ್ಯಾಬ್ ಹಾಗೂ ಆಟೋಗಳು ದೊರಕದೆ ರಸ್ತೆಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಗಸ್ತು ವಾಹನಗಳಲ್ಲಿಯೇ ನಾಗರಿಕರನ್ನು ಅವರವರ ಮನೆಗಳಿಗೆ ಬಿಡಲಾಗಿತ್ತು. ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರೀಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


