ರಾಜ್ಯ

ಮಾಸಾಂತ್ಯಕ್ಕೆ ಬಿಬಿಎಂಪಿ ಬಜೆಟ್ : ಕಾಂಗ್ರೆಸ್ , ಅಥವಾ ಜೆಡಿಎಸ್ ನಿಂದ ಬಜೆಟ್ ಮಂಡನೆ

ಮಾಸಾಂತ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡಿಸಲಾಗುತ್ತಿದೆ.

ಮಾಸಾಂತ್ಯಕ್ಕೆ ಬಿಬಿಎಂಪಿ ಬಜೆಟ್ : ಕಾಂಗ್ರೆಸ್ , ಅಥವಾ ಜೆಡಿಎಸ್ ನಿಂದ ಬಜೆಟ್ ಮಂಡನೆ
ಬಿಬಿಎಂಪಿ(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಮಾಸಾಂತ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡಿಸಲಾಗುತ್ತಿದೆ.ಬರಲಿರುವ ರಾಜ್ಯ ವಿಧಾನಸಭಾ
ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ನ್ನು ತಮ್ಮ ಪಕ್ಷದ ದೂರದೃಷ್ಟಿಯಂತೆರೂಪಿಸಬೇಕೆಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಿಲುವಾಗಿದೆ.

  ಈ ಬಜೆಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಸಚಿವರಾದ ಕೆ. ಜೆ. ಜಾರ್ಜ್. ರಾಮಲಿಂಗಾರೆಡ್ಡಿ ಅವರ ಪ್ರಭಾವ ಹೆಚ್ಚಾಗಿರಲಿದೆ.

 ಈ ವರ್ಷ ಕಾಂಗ್ರೆಸ್ ಪಕ್ಷದ ಮೇಯರ್ ಇದ್ದು, ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಬಳಿಯಿದೆ. ಈ ಸಮಿತಿ ಅಧ್ಯಕ್ಷ
ಮಹಾದೇವ್ ಬಜೆಟ್ ಮಂಡಿಸಲಿದ್ದಾರೆ. ಒಂದು ವೇಳೆ ಇದಕ್ಕೆ ಅವಕಾಶ ನೀಡದಿದ್ದರೆ ತಮ್ಮ ಬೆಂಬಲ ವಾಪಾಸ್ ಪಡೆಯುವುದಾಗಿ ಜೆಡಿಎಸ್ ಹೇಳಿದೆ.

ಆದರೆ,ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದು,  ಕಾಂಗ್ರೆಸ್ ಯೇತರರು ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಆದರೆ,  ಯಾವ ಪಕ್ಷದ ಪರಿಕಲ್ಪನೆಯಂತೆ ಬಿಬಿಎಂಪಿ ಬಜೆಟ್ ರೂಪಿತಗೊಳ್ಳಲಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ.

 ಈ ಮಧ್ಯೆ ಶಾಸಕ ಗೋಪಾಲಯ್ಯ ಮಾತನಾಡಿ,  ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೇಯರ್ ಹಾಗೂ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬೇರೆ ಬೇರೆ ಪಕ್ಷಗಳಲ್ಲಿದ್ದು, ಉಭಯ ಪಕ್ಷಗಳ ಮುಖಂಡರು ಕೂತು ಚರ್ಚಿಸಿ ಬಜೆಟ್ ರೂಪಿಸುತ್ತವೆ. ಆದರೂ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ದೂರದೃಷ್ಟಿಯಂತೆ ಬಜೆಟ್ ರೂಪಿತವಾಗಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.