ಬೆಂಗಳೂರು: ನಾಪತ್ತೆಯಾದ 1 ಗಂಟೆಯಲ್ಲೇ ತಿಂಗಳ ಹಸುಗೂಸು ಶವವಾಗಿ ಪತ್ತೆ
ಕಾಣೆಯಾಗಿದ್ದ ಒಂದು ತಿಂಗಳ ಹಸುಗೂಸು ಮಂಚದ ಕೆಳಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ....

Published On :
ಬೆಂಗಳೂರು: ಕಾಣೆಯಾಗಿದ್ದ ಒಂದು ತಿಂಗಳ ಹಸುಗೂಸು ಮಂಚದ ಕೆಳಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಸಂದ್ರ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಮಲಗಿದ್ದ ಒಂದು ತಿಂಗಳ ಹಸುಗೂಸು ಶವವಾಗಿ ಪತ್ತೆಯಾಗಿದೆ.ಕಾರ್ತಿಕ್ ಎಂಬುವವರ ಅವಳಿ ಮಕ್ಕಳಲ್ಲಿ, ಒಂದು ಹಸುಗೂಸು ಕಗ್ಗೊಲೆಯಾಗಿದ್ದು, ಉಸಿರುಗಟ್ಟಿಸಿ ಕೊಂದು, ಟವೆಲ್‌ನಲ್ಲಿ ಸುತ್ತಿದ ಶವವನ್ನ ಮಂಚದ ಕೆಳಗಿರಿಸಿ ಹೋಗಿದ್ದಾರೆ.
ಮಗುವಿನ ತಾಯಿ ಮತ್ತೊಂದಿ ಹಸೂಗೂಸಿಗೆ ಹಾಲು ಕುಡಿಸಲು ಬೇರೆ ರೂಮಿಗೆ ತೆರಳಿದ್ದರು. ಕಾರ್ತಿಕ್ ಹೊರಗಡೆ ಹೋದ 10 ನಿಮಿಷಕ್ಕೆ ಮಗು ನಾಪತ್ತೆಯಾಗಿದೆ. ಈ ಬಗ್ಗೆ ಅಶೋಕನಗರ ಪೊಲೀಸರಿಗೆ ಮಾಹಿತಿ ನೀಡಿದ ಕಾರ್ತಿಕ್, ಅವರೊಂದಿಗೆ ಮನೆಗೆ ಬಂದಿದ್ದಾನೆ.
ಅಪಹರಣ ಪ್ರಕರಣದ ದಾಖಲು ಮಾಡಿಕೊಂಡ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಏರಿಯಾದಲ್ಲಿ ಎಲ್ಲಿ ಹುಡುಕಿದರೂ ಮಗು ಸಿಕ್ಕಿರಲಿಲ್ಲ. ಪೊಲೀಸರು ವಾಪಸ್ ಕಾರ್ತಿಕ್ ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮಂಚದ ಕೆಳಗೆ ಮಗು ಶವ ಸಿಕ್ಕಿದೆ. ವೈದ್ಯರ ನಿರ್ಲಕ್ಷ್ಯ ಆರೋಪ ಸಹೋದರ ಮತ್ತು ತಂದೆಯಿಂದ ದೂರವಾಗಿದ್ದ ಕಾರ್ತಿಕ್ ಪತ್ನಿ ಜೊತೆ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಗುವನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಶೋಕ ನಗರ ಪೊಲೀಸರು ಮಗುವಿನ ಚಿಕ್ಕಪ್ಪ ಅರವಿಂದ್, ತಾತ ಚಿತ್ತರಾಜುವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗುವಿನ ಸಾವಿಗೂ ಅವರಿಗೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಕಾರ್ತಿಕ್ ಅಂತರ್ ಧರ್ಮೀಯ ವಿವಾಹವಾಗಿದ್ದರು, ಇದಕ್ಕೆ ಎರಡು ಮನೆಯವರ ವಿರೋಧವಿತ್ತು. ಹೀಗಾಗಿ ಹೊರಗಿನಿಂದ ಬಂದವರು ಯಾರೋ ಈ ಕೆಲಸ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


