ಚಿತ್ರದಲ್ಲಿ ಅವಕಾಶ ಕೊಡುಸುತ್ತೇನೆಂದು ಯುವತಿಗೆ ರೂ.8 ಲಕ್ಷ ವಂಚಿಸಿದ ವ್ಯಕ್ತಿ
ಚಿತ್ರದಲ್ಲಿ ಅವಕಾಶ ಕೊಡುಸುತ್ತೇನೆಂದು ಮಹಿಳೆಯೊಬ್ಬರನ್ನು ನಂಬಿಸಿದ್ದ ವ್ಯಕ್ತಿಯೊಬ್ಬ ರೂ.8 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Published On :
ಬೆಂಗಳೂರು; ಚಿತ್ರದಲ್ಲಿ ಅವಕಾಶ ಕೊಡುಸುತ್ತೇನೆಂದು ಮಹಿಳೆಯೊಬ್ಬರನ್ನು ನಂಬಿಸಿದ್ದ ವ್ಯಕ್ತಿಯೊಬ್ಬ ರೂ.8 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಕೆರೆಹಳ್ಳಿ ನಿವಾಸಿಯಾಗಿರುವ ಮಹಿಳೆ ಚೇತನಾ ಗಿರಿವಗರ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ನಾಗೇಶ್ ಮತ್ತು ವೀಣಾ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ ಆರೋಪಿ ನಾಗೇಶ್ ಹಾಗೂ ಆತನ ಸ್ನೇಹಿತ ವಿಣಾ ಎಂಬುವವರು ಯಶಸ್ಸು ಗಳಿಸಲು ಮಾಟಮಂತ್ರ ಮಾಡಿಸುವಂತೆ ತಿಳಿಸಿದ್ದರು. ಈ ಬಗ್ಗೆ ಚೇತನಾ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಆರೋಪಿ ಮಂಜಿನ ಹನಿ ಚಿತ್ರದ ಸಹಾಯಕ ನಿರ್ಮಾಪಕನಾಗಿದ್ದಾನೆಂದು ಹೇಳಲಾಗುತ್ತಿದೆ. ಹಲವು ಕಾರಣಗಳಿಂದಾಗಿ ಮಂಜಿನ ಹನಿ ಚಿತ್ರದ ಚಿತ್ರೀಕರಣ ಕಳೆದ 6 ವರ್ಷಗಳಿಂದ ಆರಂಭವಾಗಿಲ್ಲ. ಚಿತ್ರದಲ್ಲಿ ರವಿಚಂದ್ರನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ರವಿಚಂದ್ರನ್ ಅವರೇ ನಿರ್ಮಿಸುತ್ತಿದ್ದಾರೆ.
2015ರಲ್ಲಿ ನಾಗೇಶ್ ನನಗೆ ಪರಿಚಯವಾಗಿತ್ತೆ. ಮಂಜಿನ ಹನಿ ಚಿತ್ರದಲ್ಲಿ ನಟನ ತಂಗಿ ಪಾತ್ರದ ಅವಕಾಶ ಕೊಡಿಸುವುದಾಗಿ ನಾಗೇಶ್ ಹೇಳಿದ್ದ. ಯಶಸ್ಸು ಗಳಿಸಲು ಮಗುವನ್ನು ಬಲಿಕೊಡಬೇಕೆಂತಲೂ ತಿಳಿಸಿದ್ದ. ಇದರಂತೆ ಸಹಾಯಕ್ಕೆ ಗೌರಿ ಎಂಬುವವರ ಮೊಬೈಲ್ ಸಂಖ್ಯೆಯನ್ನು ನೀಡಿದ ಅವರೊಂದಿಗೆ ಮಾತನಾಡುವಂತೆ ತಿಳಿಸಿದ್ದ. ಬಳಿಕ ವೀಣಾ ಎಂಬುವವರ ಹೆಸರಿನ ಬ್ಯಾಂಕ್ ಖಾತೆಯ ಸಂಖ್ಯೆ ನೀಡಿ ಪೂಜೆಗೆ ರೂ.50,000 ನೀಡುವಂತೆ ತಿಲಿಸಿದ್ದರೆ. ಇದನ್ನು ನಂಬಿದ್ದ ನಾನು ಹಣವನ್ನು ಆನ್'ಲೈನ್ ಮೂಲಕ ವರ್ಗಾವಣೆ ಮಾಡಿದ್ದೆ. ಆ.1 ರಂದು ಮನೆಗೆ ಬಂದ ನಾಗೇಶ್ ರೂ.8 ಲಕ್ಷ ಹಣವನ್ನು ಪಡೆದುಕೊಂಡಿದ್ದ. ಹಣ ಪಡೆಯುವ ವೇಳೆ ಚಿತ್ರದ ಚಿತ್ರೀಕರಣ ಆರಂಭ ಮಾಡಬೇಕಿದ ಎಂದು ಹೇಳಿದ್ದೆ. ಬಳಿಕ ನಾನು ನನ್ನ ಬಳಿಯಿದ್ದ ಬೆಲೆಬಾಳುವ ಆಭರಣಗಳನ್ನೆಲ್ಲವನ್ನೂ ಮಾರಾಟ ಮಾಡಿ ಹಣವನ್ನು ಆತನಿಗೆ ನೀಡಿದ್ದೆ.
ಇದಾದ ಕೆಲ ದಿನಗಳ ಬಳಿಕ ನಾಗೇಶ್ ನನ್ನ ಸಂಪರ್ಕಕ್ಕೆ ಸಿಗಲಿಲ್ಲ. ಮೊಬೈಲ್ ಸಂಖ್ಯೆ ಕೂಡ ಸ್ವಿಚ್ ಆಪ್ ಬಂದಿತ್ತು. ಇದಾದ ಬಳಿಕ ನಾನು ಮೋಸ ಹೋಗಿದ್ದು ನನ್ನ ಗಮನಕ್ಕೆ ಬಂದಿತ್ತು ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಗೌರಿ ಎಂಬುವವರ ಹೆಸರಿನಲ್ಲಿ ವಾಟ್ಸ್ ಆ್ಯಪ್ ಮೂಲಕ ನಾಗೇಶ್ ಚೇತನ ಜೊತೆಗೆ ಮಾತುಕತೆ ನಡೆಸಿದ್ದಾನೆ. ಗೌರಿ ಎಂಬುವವರ ಜೊತೆ ಚೇತನ ನೇರವಾಗಿ ಯಾವುದೇ ರೀತಿಯ ಮಾತುಕತೆಯನ್ನೂ ನಡೆಸಿಲ್ಲ. ಕೇವಲ ವಾಟ್ಸ್ ಆ್ಯಪ್ ಮೂಲಕ ಸಂದೇಶಗಳಲ್ಲಿ ಅಷ್ಟೇ ಮಾತನಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ನಾಗೇಶ್ ಯಾರೆಂಬುದೇ ನನಗೆ ಗೊತ್ತಿಲ್ಲ
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ನಟ ರವಿಚಂದ್ರನ್ ಅವರು, ನಾಗೇಶ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ಆರೋಪಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಪ್ರಕರಣದಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲ. ದೂರುದಾರರೂ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


