ಕರ್ನಾಟಕದಲ್ಲಿ ಅನುಮೋದನೆಯಾಗದಿರುವ 23 ಕಾಲೇಜುಗಳು; ಕಣ್ಣು ಮುಚ್ಚಿ ಕುಳಿತಿರುವ ಸರ್ಕಾರ
ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದಲ್ಲಿ ...

ಬೆಂಗಳೂರು: ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿವೆ ಎಂದು ತಿಳಿದುಬಂದಿತ್ತು. ಇಲ್ಲಿ 893 ಕಾಲೇಜುಗಳಿವೆ. ಆದರೆ ಕುಖ್ಯಾತಿಯ ವಿಷಯವೆಂದರೆ ಅಖಿತ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ(ಎಐಸಿಟಿಇ)ಅನುಮೋದನೆಗೊಳ್ಳದಿರುವ ಅತಿ ಹೆಚ್ಚು ಕಾಲೇಜುಗಳು ಸಹ ಇರುವುದು ಬೆಂಗಳೂರಿನಲ್ಲಿಯೇ.
ಈ ತಿಂಗಳ ಆರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ದಾಖಲೆ ಪ್ರಕಾರ, ಕರ್ನಾಟಕದಲ್ಲಿ 23 ಉನ್ನತ ಶಿಕ್ಷಣ ಸಂಸ್ಥೆಗಳು ಎಐಸಿಟಿಇಯಿಂದ ಅನುಮೋದನೆಗೊಂಡಿಲ್ಲ. ದೇಶದಲ್ಲಿ ಒಟ್ಟಾರೆ ಒಟ್ಟು 277 ಇಂತಹ ಅನುಮೋದನೆಯಾಗದಿರುವ ಕಾಲೇಜುಗಳಿವೆ. ಎಐಸಿಟಿಇ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇಂತಹ ಅನುಮೋದನೆಗೊಳ್ಳದಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ ಮತ್ತು ಇಂತಹ ಶಿಕ್ಷಣ ಸಂಸ್ಥೆಗಳನ್ನು ಪರೀಕ್ಷಿಸುವಂತೆ ಮತ್ತು ಅನುಮೋದನೆಗೊಳ್ಳದಿರುವ ಸಂಸ್ಥೆಗಳನ್ನು ಮುಚ್ಚಿ ಹೊಸ ಪಟ್ಟಿ ಬಿಡುಗಡೆ ಮಾಡುವಂತೆ ಕೇಂದ್ರ ತನಿಖಾ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು.
ಆದರೆ ರಾಜ್ಯ ಸರ್ಕಾರ ಇದುವರೆಗೆ ಈ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ ಮತ್ತು ಪಟ್ಟಿಯಲ್ಲಿ ಸೂಚಿಸಿರುವ ಕೆಲವು ಇತ್ತೀಚಿನ ಕಾಲೇಜುಗಳಲ್ಲಿ ಕೆಲವು ಹೆಸರು, ವಿಳಾಸಗಳನ್ನು ಬದಲಿಸಿದ್ದು ಇನ್ನು ಕೆಲವು ಮುಚ್ಚಿವೆ.
ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ, ಅನುಮೋದನೆ ಪಡೆಯದಿರುವ ಶಿಕ್ಷಣ ಸಂಸ್ಥೆಗಳನ್ನು ಆಧರಿಸಿ ಪಟ್ಟಿ ತಯಾರಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಾವಿದನ್ನು ಘೋಷಿಸುತ್ತಿದ್ದೇವೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಿ ಅವುಗಳನ್ನು ಮುಚ್ಚುವಂತೆ ಹೇಳುತ್ತೇವೆ ಎಂದರು.
ಪಟ್ಟಿಯಲ್ಲಿರುವ ಕಾಲೇಜುಗಳಲ್ಲಿ ಕೆಲವು ಸ್ವಯಂಪ್ರೇರಿತವಾಗಿ ಮುಚ್ಚಿಕೊಂಡಿವೆ ಇನ್ನು ಕೆಲವು ಅವುಗಳನ್ನು ಬೇಕೆ ಕೋರ್ಸ್ ಗಳಿಗೆ ಬದಲಾಯಿಸಿಕೊಂಡಿವೆ.
ಸಾರ್ವಜನಿಕರು ಅನುಮೋದನೆಗೊಳ್ಳದಿರುವ ಕಾಲೇಜುಗಳ ವಿವರಗಳಿಗಾಗಿ ವೆಬ್ ಸೈಟ್ ವಿಳಾಸ WWW.aicte-india.org ನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


