ಡಿಸೆಂಬರ್ ಅಂತ್ಯದೊಳಗೆ 'ಉಜ್ವಲ ಯೋಜನೆ'ಯ ಲಾಭ ಎಲ್ಲರನ್ನೂ ತಲುಪಲಿದೆ: ಸಚಿವ
2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್ ಅವರು ಹೇಳಿದ್ದಾರೆ...

Published On :
ಬೆಂಗಳೂರು: 2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್ ಅವರು ಹೇಳಿದ್ದಾರೆ.
ಯೋಜನೆ ಕುರಿತಂತೆ ಮಾತನಾಡಿರುವ ಅವರು, ಉಜ್ವಲ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದಿಂದ ಒಟ್ಟು 20,40,826 ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ 15,94,439 ಅರ್ಜಿಗಳನ್ನು ಪರಿಗಣಿಸಿ ಯೋಜನೆ ತಲುವಂತೆ ಮಾಡಲಾಗಿದೆ. ಉನ್ನುಳಿದವರಿಗೆ ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯದೊಳಗೆ ಅನುಕೂಲಗಳು ತಲುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಯೋಜನೆಯಡಿಯಲ್ಲಿ 2,040,826 ಅರ್ಜಿಗಳನ್ನು ಸಲ್ಲಿಸುವ ಮೂಲಕ ಕರ್ನಾಟಕ ರಾಜ್ಯ 12ನೇ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶ 12,084,879 ಅರ್ಜಿಗಳ ಮೂಲಕ ಮೊದಲ ಸ್ಥಾನದಲ್ಲಿದೆ. ಬಿಹಾರ 10,496,175), ಪಶ್ಚಿಮ ಬಂಗಾಳ 8,482,638 ಅರ್ಜಿಗಳನ್ನು ಸಲ್ಲಿಸಿದೆ. ಇನ್ನು ಕರ್ನಾಟಕ ರಾಜ್ಯದ ತುಮಕೂರಿನಿಂದೇ ಒಟ್ಟು 1,12,926 ಅರ್ಜಿಗಳು ಬಂದಿದ್ದವು. ರಾಯಚೂರು 1,11,262, ಬೆಳಗಾವಿ 91,214 ಅರ್ಜಿ ಸಲ್ಲಿಸಿದ್ದವು. ಕೊಡಗಿನಿಂದ ಅತ್ಯಂತ ಕಡಿಮೆ 3,914 ಅರ್ಜಿಗಳು ಬಂದಿದ್ದವು. ದಕ್ಷಿಣ ಕನ್ನಡದಿಂದ 13,693, ಬೆಂಗಳೂರು ನಗರದಿಂದ 13,358 ಅರ್ಜಿಗಳು ಬಂದಿವೆ ಎಂದು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


