ಕ್ಯಾನ್ಸರ್ ಗೆದ್ದಳು, ವಿಧಿಯಾಟ ಗೆಲ್ಲಲಾಗದೇ ಮಳೆಗೆ ಬಲಿಯಾದ ಭಾರತಿ!
ಶುಕ್ರವಾರ ಸುರಿದ ಭಾರಿ ಮಳೆ ಒಂದು ಕುಟುಂಬದ ಆಧಾರ ಸ್ಥಂಬವನ್ನೇ ಬಲಿ ಪಡೆದಿದ್ದು, ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ಕಾಯಿಲೆ ಗೆದ್ದಿದ್ದ ಮಹಿಳೆ ಮಳೆಗೆ ಬಲಿಯಾದ ಧಾರುಣ ಘಟನೆ ಸಂಭವಿಸಿದೆ.

Published On :
ಬೆಂಗಳೂರು: ಶುಕ್ರವಾರ ಸುರಿದ ಭಾರಿ ಮಳೆ ಒಂದು ಕುಟುಂಬದ ಆಧಾರ ಸ್ಥಂಬವನ್ನೇ ಬಲಿ ಪಡೆದಿದ್ದು, ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ಕಾಯಿಲೆ ಗೆದ್ದಿದ್ದ ಮಹಿಳೆ ಮಳೆಗೆ ಬಲಿಯಾದ ಧಾರುಣ ಘಟನೆ ಸಂಭವಿಸಿದೆ.
ನಿನ್ನೆ ಭಾರಿ ಮಳೆಯಿಂದಾಗಿ ಜೆಸಿ ನಗರದ ಡಿಸ್ಪೆಂನ್ಸರಿ ರಸ್ತೆಯಲ್ಲಿ ಮರ ಧರೆಗುರುಳಿದ ಪರಿಣಾಮ ಒಂದೇ ಕುಟುಂಬದ ಮೂವರು ಬಲಿಯಾಗಿದ್ದರು. ಈ ಪೈಕಿ ದಂಪತಿಗಳು ಹಾಗೂ ಮಹಿಳೆಯ ತಮ್ಮ ಅವಘಡದಲ್ಲಿ ಬಲಿಯಾಗಿದ್ದ. ಇದೀಗ ಈ ಕುಟುಂಬದ ಮಾಹಿತಿಗಳು ಲಭ್ಯವಾಗಿದ್ದು, ಘಟನೆಯಲ್ಲಿ ಮೃತಪಟ್ಟ ಮಹಿಳೆ ಭಾರತಿ ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ರೋಗದಿಂದ ಮುಕ್ತರಾಗಿ ಸಹಜ ಜೀವನದತ್ತ ಮುಖ ಮಾಡಿದ್ದರಂತೆ. ಆದರೆ ಕ್ಯಾನ್ಸರ್ ಜೊತೆಗಿನ ಸೆಣಸಾಟದಲ್ಲಿ ಜಯಿಸಿದ ಮಹಿಳೆ ಭಾರತಿ ವಿಧಿಯಾಟದ ಜೊತೆಗಿನ ಸೆಣಸಾಟದಲ್ಲಿ ಸೋತು ಮರಬಿದ್ದಿದ್ದರಿಂದ ತಮ್ಮ ಕಾರಿನಲ್ಲೇ ತಮ್ಮ ಗಂಡ ರಮೇಶ್ ಹಾಗೂ ತಮ್ಮ ಜಗದೀಶ್ ರೊಂದಿಗೆ ಕೊನೆಯುಸಿರೆಳೆದಿದ್ದಾರೆ.
ಭಾರತಿ ಕುಟುಂಬದ ಮೂಲಗಳು ತಿಳಿಸಿರುವಂತೆ ಭಾರತಿ ಅವರು ಹಲವು ವರ್ಷಗಳಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ. ಅವರ ಚಿಕಿತ್ಸೆಗಾಗಿ ಪತಿ ರಮೇಶ್ ಸಾಕಷ್ಚು ಸಾಲ ಮಾಡಿಕೊಂಡಿದ್ದರಂತೆ. ಅಂತೆಯೇ ಸಹೋದರ ಜಗದೀಶ್ ಕೂಡ ಆರ್ಥಿಕ ನೆರವು ನೀಡಿದ್ದರಂತೆ. ಇತ್ತೀಚಷ್ಟೇ ವೈದ್ಯರು ಅವರ ಕ್ಯಾನ್ಸರ್ ಗುಣಮುಖವಾದ ಕುರಿತು ಮಾಹಿತಿ ನೀಡಿದ್ದರು. ಇದೇ ಕಾರಣಕ್ಕಾಗಿ ಭಾರತಿ ಇತ್ತೀಚೆಗಷ್ಟೇ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರಂತೆ. ಪತಿ ರಮೇಶ್ ತಮ್ಮ ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಹೀಗಾಗಿ ಭಾರತಿ ತಾವೂ ಕೂಡ ಕೆಲಸಕ್ಕೆ ಹೋಗಿ ಸಾಲ ತೀರಿಸಲು ಮುಂದಾಗಿದ್ದರು. ಇದಕ್ಕಾಗಿ ಭಾರತಿ ಅವರು ಹೋಮ್ ಗಾರ್ಡ್ ನಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ಹೇಳಲಾಗಿದೆ. ಆದರೆ ಕ್ಯಾನ್ಸರ್ ನ ಜೊತೆಗಿನ ಹೋರಾಟದಲ್ಲಿ ಭಾರತಿ ಗೆದ್ದರೂ ವಿಧಿಯಾಟ ಗೆಲ್ಲಲಾಗದೇ ಮಳೆಗೆ ಬಲಿಯಾಗಿದ್ದಾರೆ.
ಕೇವಲ ಭಾರತಿ ಅವರು ಮಾತ್ರವಲ್ಲದೇ ಅವರೊಂದಿಗೆ ಪತಿ ರಮೇಶ್ ಹಾಗೂ ಸಹೋದರ ಜಗದೀಶ್ ಕೂಡ ಮೃತಪಟ್ಟಿದ್ದಾರೆ.
ಇನ್ನು ಜಗದೀಶ್ ಅವರು ವೃತ್ತಿಯಲ್ಲಿ ಟೈಲರ್ ಆಗಿದ್ದು, ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಜಗದೀಶ್ ತಮ್ಮ ಇಬ್ಬರು ಸಹೋದರಿಯರ ಮದುವೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರಂತೆ. ಇತ್ತೀಚೆಗಷ್ಟೇ ಅಂಗಡಿಯೊಂದನ್ನು ಬಾಡಿಗೆಗೆ ಪಡೆದು ದುಡಿಮೆ ಆರಂಭಿಸಿದ್ದರಂತೆ. ಅಷ್ಟರಲ್ಲಾಗಲೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದು ಜಗದೀಶ್ ಅವರನ್ನು ಬಲಿ ಪಡೆದಿದ್ದಾನೆ.
ಹೇಗಾಯ್ತು ಘಟನೆ?
ಮಾರುತಿ ಎಸ್ಟೀಮ್ ಕಾರು ರಿಪೇರಿ ಮಾಡಿಸಲು ಪತ್ನಿ ಹಾಗೂ ಭಾವ ಅವರೊಂದಿಗೆ ರಮೇಶ್ ಡಿಸ್ಪೆನ್ಸರಿ ರಸ್ತೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಗೆ ಬಂದಿದ್ದ ಅವರು ರಾತ್ರಿವರೆಗೂ ಅಲ್ಲಿಯೇ ಇದ್ದರು. ರಾತ್ರಿ 7.45ಕ್ಕೆ ದುರಸ್ತಿಗೊಂಡ ಬಳಿಕ ಕಾರನ್ನು ಪರೀಕ್ಷಿಸಲು ಮೆಕಾನಿಕ್ ಅಲಿ, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು, ರಮೇಶ್ ಹಾಗೂ ಇನ್ನಿಬ್ಬರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ಸುರಿದ ಗಾಳಿಸಹಿತ ಭಾರಿ ಮಳೆಗೆ ಗ್ಯಾರೇಜ್ ಪಕ್ಕದಲ್ಲಿಯೇ ಇದ್ದ ಮರ ಕಾರಿನ ಹಿಂಭಾಗದ ಮೇಲೆ ಬಿದ್ದಿದೆ. ಅದರಿಂದಾಗಿ ರಮೇಶ್, ಭಾರತಿ ಮತ್ತು ಜಗದೀಶ್ ಮರದ ಕೆಳಗೆ ಸಿಲುಕಿದ್ದರು. ಸ್ಥಳೀಯರು, ಅಗ್ನಿಶಾಮಕದ ದಳದ ಸಿಬ್ಬಂದಿ ಧಾವಿಸಿ, ಮರದ ಕೆಳಗೆ ಸಿಲುಕಿದ್ದವರ ರಕ್ಷಣೆ ಮಾಡಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಇನ್ನು, ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ ಅಲಿಯನ್ನು ಮಾತ್ರ ರಕ್ಷಿಸಲಾಗಿದೆ. ರಮೇಶ್ ಹಾಗೂ ಭಾರತಿ ದಂಪತಿ ಪುತ್ರ ರಾಹುಲ್ ಕಾರಿನಲ್ಲಿ ಕುಳಿತುಕೊಳ್ಳದೆ ಹೊರಗೆ ನಿಂತಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


