ರೈಲಿನಲ್ಲಿ ಹರ್ಯಾಣ ಮೂಲದ ದರೋಡೆಕೋರರ ಕಳ್ಳತನ: ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು
ಕೃಷ್ಣರಾಜಪುರ ರೈಲ್ವೆ ನಿಲ್ದಾಣದ ಮೂಲಕ ಹಾದುಹೋಗುವ ಪ್ರಯಾಣಿಕರ ರೈಲುಗಳಲ್ಲಿ ಹರ್ಯಾಣದ ...

Published On :
ಬೆಂಗಳೂರು: ಕೃಷ್ಣರಾಜಪುರ ರೈಲ್ವೆ ನಿಲ್ದಾಣದ ಮೂಲಕ ಹಾದುಹೋಗುವ ಪ್ರಯಾಣಿಕರ ರೈಲುಗಳಲ್ಲಿ ಹರ್ಯಾಣದ ವೃತ್ತಿಪರ ದರೋಡೆಕೋರರ ತಂಡ ಸರಣಿ ಕಳ್ಳತನ ನಡೆಸುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ರೈಲು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರು ವಿಭಾಗದ ರೈಲ್ವೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನೂಪ್ ಎ ಶೆಟ್ಟಿ ವಿವರ ನೀಡಿ, ಹರ್ಯಾಣ ಮೂಲದ ವೃತ್ತಿಪರ ದರೋಡೆಕೋರರ ತಂಡ ದೆಹಲಿ, ಹರ್ಯಾಣ, ರಾಜಸ್ತಾನಗಳಲ್ಲಿ ಪ್ರಯಾಣಿಕರ ರೈಲಿನಲ್ಲಿ ಪ್ರಯಾಣಿಕರ ಲಗ್ಗೇಜುಗಳಿಂದ ಹಣ, ವಸ್ತುಗಳನ್ನು ಕದಿಯುತ್ತಾರೆ. ಇದೀಗ ಆ ತಂಡ ಬೆಂಗಳೂರಿಗೆ ಸಹ ಬಂದಿದೆ ಎಂದು ಹೇಳಿದರು.
ಕಳೆದ ತಿಂಗಳು ಫೆಬ್ರವರಿ 9ರಂದು ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಮೂವರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿದ್ದರು. ಅವರನ್ನು ಹಿಡಿದು ತನಿಖೆ ನಡೆಸಿದಾಗ ಕೆಲವು ರೈಲುಗಳಲ್ಲಿ ಪ್ರಯಾಣಿಕರ ವಸ್ತುಗಳನ್ನು ದರೋಡೆ ಮಾಡಿದ್ದಾಗ ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನ ಹೊಟೇಲೊಂದರಲ್ಲಿ ಕದ್ದು ಅಡಗಿಸಿಟ್ಟಿದ್ದ 498 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ಹಣವನ್ನು ಖರ್ಚು ಮಾಡಿ ಮುಗಿಸಿದ್ದರು ಎಂದು ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಸೈನಿಕರಂತೆ ವೇಷಭೂಷಣ ತೊಟ್ಟು ಸ್ಲೀಪರ್ ಕ್ಲಾಸ್ ಟಿಕೆಟ್ ಖರೀದಿಸಿ ರೈಲು ಹತ್ತುತ್ತಾರೆ. ಕೆ.ಆರ್.ಪುರಂನಂತಹ ಬೆಂಗಳೂರು ಹೊರವಲಯದ ನಿಲ್ದಾಣಗಳಲ್ಲಿ ರೈಲಿಗೆ ಹತ್ತುತ್ತಾರೆ. ಪ್ರಯಾಣಿಕರಿಗೆ ಯಾವುದೇ ಸಂಶಯ ಬರದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.
ಸೇನೆಯವರೆಂದು ಜನರು ಗೌರವ ತೋರಿಸುತ್ತಾರೆ. ರಾತ್ರಿ ಹೊತ್ತಿನಲ್ಲಿ ಪ್ರಯಾಣಿಕರ ಬ್ಯಾಗ್ ಗಳಲ್ಲಿರುವ ವಸ್ತುಗಳನ್ನು ಬೀಗದ ಕೀಯ ಸಹಾಯದಿಂದ ಕದ್ದು ಬೆಳಕು ಹರಿಯುವ ಮುನ್ನವೇ ಮಧ್ಯದಲ್ಲಿ ಇನ್ನೊಂದು ಸ್ಟೇಷನ್ ನಲ್ಲಿ ಇಳಿಯುತ್ತಾರೆ. ಹೊಟೇಲ್ ನಲ್ಲಿ ಅದಾಗಲೇ ಬುಕ್ ಮಾಡಿರುತ್ತಾರೆ. ಅಲ್ಲಿ ಹೋಗಿ ತಮ್ಮ ವಸ್ತುಗಳನ್ನು ಇಡುತ್ತಾರೆ. ಈ ದರೋಡೆಕೋರರೆಲ್ಲ 20 ರಿಂದ 30 ವರ್ಷದ ಒಳಗಿನವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


