ರಾಜ್ಯ

ಬೆಂಗಳೂರು: ಮಾವನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ಸೊಸೆ

ಪತಿಯ ತಂದೆ ಮಾವನ ವಿರುದ್ಧ 28 ವರ್ಷದ ಮಹಿಳಾ ಎಂಜಿನಿಯರ್ ಒಬ್ಬರು ಬಸವನಗುಡಿ ಮಹಿಳಾ...

ಬೆಂಗಳೂರು: ಮಾವನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ಸೊಸೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಪತಿಯ ತಂದೆ ಮಾವನ ವಿರುದ್ಧ 28 ವರ್ಷದ ಮಹಿಳಾ ಎಂಜಿನಿಯರ್ ಒಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. 
ರಾಧಿಕಾ (ಹೆಸರು ಬದಲಿಸಲಾಗಿದೆ) ಮೊನ್ನೆ ಸೋಮವಾರ  ಬಸವನಗುಡಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ, ''ವರ್ಷದ ಹಿಂದೆ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಘುನಂದನ್ ಎಂಬುವವರನ್ನು ವಿವಾಹವಾಗಿದ್ದೆ. ಮದುವೆಯಾದ ತಕ್ಷಣ ತಮ್ಮ ಪತಿ ಅಮೆರಿಕಾಕ್ಕೆ ವೃತ್ತಿ ಸಂಬಂಧ ಹೊರಟು ಹೋದರು. ನಾನು ಇಂದಿರಾ ನಗರದಲ್ಲಿ ಅತ್ತೆ-ಮಾವನ ಜೊತೆ ವಾಸವಾಗಿದ್ದೆ. ಕೆಲ ತಿಂಗಳು ಕಳೆದ ಮೇಲೆ ಮಾವ ವೆಂಕಟಾಪತಿ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಲಾರಂಭಿಸಿದರು. 
ಈ ಬಗ್ಗೆ ಪತಿ ರಘುನಂದನ್ ಗೆ ಹೇಳಿ ತನಗೆ ಇಲ್ಲಿರಲು ಸಾಧ್ಯವಾಗುತ್ತಿಲ್ಲ, ತನ್ನನ್ನೂ ಅಮೆರಿಕಕ್ಕೆ ಕರೆದುಕೊಂಡು ಹೋಗುವಂತೆ ಕೋರಿದೆ. ಅದಕ್ಕೆ ವರದಕ್ಷಿಣೆ ತಂದರೆ ಮಾತ್ರ ಅಮೆರಿಕಕ್ಕೆ ಕರೆದೊಯ್ಯುವುದಾಗಿ ಹೇಳಿದರು. ತಾಯಿ ಮನೆಗೆ ಹೋಗಿ ಚಿನ್ನ ತೆಗೆದುಕೊಂಡು ಬಂದಾಗ ಅಮೆರಿಕಾಕ್ಕೆ ಕರೆದುಕೊಂಡು ಹೋದರು. ಸ್ವಲ್ಪ ಸಮಯದಲ್ಲಿ ಮಾವ ವೆಂಕಟಾಪತಿ ಮತ್ತು ಅವರ ಪತ್ನಿ ಕೂಡ ಅಮೆರಿಕಾಕ್ಕೆ ಹೋಗಿ ನೆಲೆಸಿದರು. 
ಅಲ್ಲಿ ಮತ್ತೆ ಮಾವ ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ಆಗ ಪತಿಗೆ ಹೇಳಿದಾಗ ತಮ್ಮ ತಂದೆ ಜೊತೆ ಸಹಕರಿಸುವಂತೆ ಹೇಳಿದರು. ಅವರ ದುರ್ವರ್ತನೆ ಗೊತ್ತಾದರೂ ಕೂಡ ಅತ್ತೆ ಮತ್ತು ತಮ್ಮ ಪತಿ ಮಾವನ ಬೆಂಬಲಕ್ಕೆ ನಿಂತರೇ ಹೊರತು ತನಗೆ ಆಸರೆಯಾಗಲಿಲ್ಲ. ಕಿರುಕುಳ ಇನ್ನಷ್ಟು ಹೆಚ್ಚಾಗತೊಡಗಿತು ಎಂದು ರಾಧಿಕಾ ದೂರಿನಲ್ಲಿ ವಿವರಿಸಿದ್ದಾರೆ.
ಇದರಿಂದ ನೊಂದು ಭಾರತಕ್ಕೆ ವಾಪಸಾದ ರಾಧಿಕಾ ಪೊಲೀಸರಿಗೆ ದೂರು ನೀಡಿದ್ದಾರೆ.
ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಕೇಸನ್ನು ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿಗಳನ್ನು ಸದ್ಯದಲ್ಲಿಯೇ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.