ಅಂಧತ್ವಕ್ಕೆ ಸವಾಲು ಹಾಕಿ ಯುಪಿಎಸ್ಸಿಯಲ್ಲಿ ಯಶಸ್ಸು ಗಳಿಸಿದ ಕೆಂಪಹೊನ್ನಯ್ಯ!
ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಆಗಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಮೂಲದ ಕೆಂಪಹೊನ್ನಯ್ಯ ಅವರು ಯುಪಿಎಸ್ ಸಿ ಯಲ್ಲಿ 340ನೇ ಸ್ಥಾನಗಳಿಸಿ ಇಡೀ ರಾಜ್ಯಕ್ಕೆ ಗೌರವ ತಂದಿದ್ದಾರೆ.

ಬೆಂಗಳೂರು: ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಆಗಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಮೂಲದ ಕೆಂಪಹೊನ್ನಯ್ಯ ಅವರು ಯುಪಿಎಸ್ ಸಿ ಯಲ್ಲಿ 340ನೇ ಸ್ಥಾನಗಳಿಸಿ ಇಡೀ ರಾಜ್ಯಕ್ಕೆ ಗೌರವ ತಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕಣ್ಣು ಕಳೆದು ಕೊಂಡ ಕೆಂಪ ಹೊನ್ನಯ್ಯ ಅಂಧತ್ವಕ್ಕೆ ಸವಾಲು ಹಾಕಿ, ಮೂರನೇ ಬಾರಿಗೆ ಕೇಂದ್ರ ಲೋಕಸೇವಾ ಆಯೋಗ(ಯು ಪಿಎಸ್ ಸಿ) ಪರೀಕ್ಷೆಯಲ್ಲಿ 340ನೇ ರ್ಯಾಂಕ್ ಗಳಿಸುವ ಮೂಲಕ ಯಶಸ್ಸುಗಳಿಸಿದ್ದಾರೆ. ಆದರೆ ಕೆಂಪ ಹೊನ್ನಯ್ಯ ಅವರ ಈ ಅಪೂರ್ವ ಸಾಧನೆಯ ಹಿಂದೆ ಅವರ ಪತ್ನಿ ಅಂಚಿತಾ ಪಾಲು ಕೂಡ ಇದ್ದು, ತಮ್ಮ ಪತಿಗಾಗಿ ಆಡಿಯೋ ನೋಟ್ಸ್ ಗಳನ್ನು ತಯಾರಿಸಿ ಅವುಗಳನ್ನು ಕೆಂಪ ಹೊನ್ನಯ್ಯರಿಗೆ ಕೇಳಿಸಿ ತರಬೇತಿ ನೀಡುತ್ತಿದ್ದರಂತೆ. ಈ ವಿಚಾರವನ್ನು ಸ್ವತಃ ಕೆಂಪ ಹೊನ್ನಯ್ಯ ಅವರೇ ಹೇಳಿಕೊಂಡಿದ್ದು, ನಿನ್ನೆ ನಡೆದ ರಾಜ್ಯ ಸರ್ಕಾರದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
ಪತ್ನಿ ಅಚಂತಾ ಅವರು ಮೈಸೂರಿನ ಸ್ನೇಹಕಿರಣ ವಿಕಲಚೇತನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ನೆರವಿನಿಂದಾಗಿಯೇ ನಾನು ವಿಶೇಷ ತರಬೇತಿ ಪಡೆಯಲು ನೆರವಾಯಿತು. ನಿಜ ಹೇಳಬೇಕು ಎಂದರೆ ಅವರೇ ನಿಜವಾದ ಐಎಎಸ್ ಅಧಿಕಾರಿ. ನನ್ನ ಮಕ್ಕಳು ನನ್ನನ್ನು ತಮಾಷೆಯಿಂದ ಕೆಂಪ ಐಎಎಸ್ ಎಂದು ಹೇಳುತ್ತಿದ್ದರೆ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ನನ್ನ ಪೋಷಕರು ರೈತರಾಗಿದ್ದು, ನನ್ನ ತಂದೆ ಹೊನ್ನಯ್ಯ ಈಗಿಲ್ಲ. ತಾಯಿ ಮುನಿಯಮ್ಮ ಅವರು ಕೂಡ ರೈತರಾಗಿದ್ದು, ಪ್ರಸ್ತುತ ಕಾರ್ಯಕ್ರಮಕ್ಕೆ ಬಂದಿಲ್ಲ.
ನನ್ನ ಮೂರನೇ ತರಗತಿಯಲ್ಲೇ ನಾನು ನನ್ನ ಕಣ್ಣುಗಳನ್ನು ಕಳೆದುಕೊಂಡೆ. ನಾನು ಸರ್ಕಾರಿ ಅಂಧರ ಶಾಲೆಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದೆ. ನನ್ನ ಸಂಪೂರ್ಣ ವಿದ್ಯಾಭ್ಯಾಸವಾಗಿದ್ದು ಸರ್ಕಾರಿ ಕಾಲೇಜುಗಳಲ್ಲೇ..ಪ್ರಸ್ತುತ ಒಂಟಿಕೊಪ್ಪಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸತತ ಪ್ರಯತ್ನದ ಬಳಿಕ ನನಗೆ ಈ ಸಾಧನೆ ಒಲಿದಿದ್ದು, ನನ್ನ ಸ್ನೇಹಿತರು ಮತ್ತು ಪತ್ನಿ ನೆರವಿನಿಂದ ಈ ಸಾಧನೆ ಮಾಡಿದ್ದೇನೆ.
ನನ್ನ ಸಹೋದರ ಕೂಡ ವಿಕಲಚೇತನನಾಗಿದ್ದು, ವಿಕಲಚೇತನರಿಗೆ ಏನಾದರೂ ನೆರವಾಗಬೇಕು ಎನ್ನುವ ಹೆಬ್ಬಯಕೆ ನನ್ನಲ್ಲಿದೆ. ನಾನು ಸೇವೆಗೆ ಆಯ್ಕೆಯಾದ ಬಳಿಕ ಈ ಬಗ್ಗೆ ಖಂಡಿತಾ ಗಮನ ಹರಿಸುತ್ತೇನೆ ಎಂದು ಕೆಂಪ ಹೊನ್ನಯ್ಯ ಹೇಳಿದ್ದಾರೆ.
ಇನ್ನು ತಮ್ಮ ಪತಿಯ ಯಶಸ್ಸಿನ ಕುರಿತು ಸಂತೋಷದಿಂದಲೇ ಮಾತನಾಡುವ ಪತ್ನಿ ಅಚಿಂತಾ ಅವರು, ಅವರ ಈ ಸಾಧನೆ ಹಿಂದೆ ಸಾಕಷ್ಟ ಶ್ರಮವಿದೆ. ಅವರ ಸಾಧನೆ ಬಗ್ಗೆ ನನಗೆ ತುಂಬಾ ಖುಷಿ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


